ಜೆಡಿಎಸ್ ರಾಜ್ಯಭಾರ : ಕುಮಾರಣ್ಣ ಈ ಭಾರಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ನೂರಕ್ಕೆ ನೂರು ಸತ್ಯ



ಮೈಸೂರು ಯಧುವಂಶೀಯ ಅರಸರ ಮಾನವೀಯ ಗುಣಗಳನ್ನು ದುರುಪಯೋಗ ಪಡಿಸಿಕೊಂಡಿದ್ದ ದಿವಾನರು ಕನ್ನಡ ನಾಡಿಗೆ ದ್ರೋಹ ಮಾಡಿ ಕಾವೇರಿ ನದಿ ನೀರು ತಮಿಳು ನಾಡಿಗೆ ವರದಾನವಾಗುವಂತೆ ಮಾಡಿದ್ದಾರೆ ಎಂದು ಜೆಡಿಎಸ್ ವರೀಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.
ಮಾಗಡಿ ತಾಲ್ಲೂಕಿನಲ್ಲಿ ಜನಿಸಿ, ಬೆಂಗಳೂರು ನಗರದಲ್ಲಿ ನೆಲೆಸಿರುವ ಮೂಲನಿವಾಸಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು, ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರು ಸಹ ಅಂದಿನ ತಮಿಳು ನಾಡು ಮುಖ್ಯಮಂತ್ರಿ ಕಾಮರಾಜ್ ನಾಡರ್ ಅವರಿಗೆ ಪತ್ರ ಬರೆದು ಕಾವೇರಿ ನದಿ ನೀರನ್ನು ಎಷ್ಟು ಬೇಕಾದರೂ ಬಳಸಿಕೊಳ್ಳಿ, ನಮಗೆ ಭತ್ತ ಕೊಡಿ ಎಂದು ತಿಳಿಸಿರುವುದು ಸಹ ತಮಿಳರಿಗೆ ವರದಾನವಾಯಿತು. ತಮಿಳು ನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಪ್ರಾದೇಶಿಕ ಪಕ್ಷಗಳು ಇರುವುದರಿಂದ ನಮ್ಮ ನಾಡಿನ ನದಿಗಳ ನೀರನ್ನು ಗದ್ದಲ ಮಾಡಿದ್ದರೂ ಸಹಿತ ಹೆಚ್ಚು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ,ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳು ಕನ್ನಡ ನಾಡಿನ ಹಿತವನ್ನು ಬಲಿಕೊಟ್ಟು ಅಧಿಕಾರ ನಡೆಸಿ ವಂಚಿಸುತ್ತಿವೆ. ನಮ್ಮ ನಾಡಿನ ನೆಲಜಲ ರಕ್ಷಿಸಲು ಜೆಡಿಎಸ್ ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂದು ಪ್ರತಿಪಾದಿಸಿದ ಎಚ್.ಡಿ.ದೇವೇಗೌಡ, ನಮ್ಮ ರಾಜ್ಯದ 29 ತಾಲ್ಲೂಕುಗಳು ಮತ್ತು 9 ಜಿಲ್ಲೆಯ ಜನರಿಗೆ ಕಾವೇರಿ ನದಿಯ ನೀರೆ ಕುಡಿಯಲು ಆಧಾರವಾಗಿದೆ, ಜೆಡಿಎಸ್ ಪಕ್ಷ ಅಧಿಕಾರಕ್ಕ ಬರುವುದು ಖಚಿತ, ಎಚ್.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗುವುದು ಸಹ ನೂರಕ್ಕೆ ನೂರರಷ್ಟು ಸತ್ಯ ಎಂದರು.ಮಾಗಡಿಯಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ ಗೆಲುವಿಗೆ ಎಲ್ಲರೂ ಸಹಕಾರ ನೀಡಿ ಎಂದು ದೇವೇಗೌಡರು ತಿಳಿಸಿದರು, ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ ಮಾತನಾಡಿ, ಕ್ಷೇತ್ರದ ಕೆಲಸ ಮಾಡಲು ಜನತೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
Comments