ಮೋದಿಯದು ಮನಕೀ ಬಾತ್ ನಮ್ದು ಕಾಮಕೀ ಬಾತ್.. ಪರಮೇಶ್ವರ್ ನಾನು ಇಬ್ಬರೂ ಒಳ್ಳೇ ಗೆಳೆಯರು... ಪರಂರನ್ನು ಕೊರಟಗೆರೆಯಿಂದ ಈ ಬಾರಿ ಗೆಲ್ಲಿಸಿ
ಕೊರಟಗೆರೆ ಮಾ.:- ದೇವರಾಜ್ ಅರಸು ನಂತರದಲ್ಲಿ ಪೂರ್ಣಾಧಿ ಮುಖ್ಯಮಂತ್ರಿ ಸರ್ಕಾರ ಮಾಡಿರುವುದು ನಾನೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಇಂಧಿರಾ ಕ್ಯಾಂಟೀನ್ ಮತ್ತು ಜನಾಶೀರ್ವಾದ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಮತ್ತೆ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಬಿಜೆಪಿಯನ್ನು ಮೋದಿಯನ್ನು ತೋರಿಸಿ ಯಡ್ಯೂರಪ್ಪ ಮತ ಕೇಳುತ್ತಾರೆ ಅದೇ ರೀತಿ ಯಡ್ಯೂರಪ್ಪನನ್ನು ತೋರಿಸಿ ಮೋದಿ ಮತ ಕೇಳುತ್ತಾರೆ ಆದರೆ ನಾವು ಅಭಿವೃದ್ಧಿಯನ್ನು ತೋರಿಸಿ ಮತ ಕೇಳುತ್ತಿದ್ದೇವೆ . ಬಿಜೆಪಿ ಅಧಿಕಾರದಲ್ಲಿದ್ದಾಗ ಯಡ್ಯೂರಪ್ಪರ ಬಹುತೇಕ ಮಂತ್ರಿಡಲದಲ್ಲಿ ಯಡ್ಯೂರಪ್ಪನವರನ್ನು ಸೇರಿಸಿ ಬಹುತೇಕ ಸಚಿವರು ಜೈಲಿಗೆ ಹೋಗಿ ಬಂದಿದ್ದಾರೆ ಇವರನ್ನು ಕೂರಿಸಿಕೊಂಡು ಮೋದಿ ಕಾಂಗ್ರೇಸ್ ನಮ್ಮ ಸರ್ಕಾರವನ್ನು ಭ್ರಷ್ಟ ಸರ್ಕಾರ ಭ್ರಷ್ಟ ಸರ್ಕಾರ ಎಂದು ಹೇಳುತ್ತಿದ್ದಾರೆ, ಜೈಲಿಗೆ ಹೋದವರನ್ನು ಮತ್ತೆ ಮುಖ್ಯಮಂತ್ರಿ ಮಾಡ್ ತೀವೀ ಅನ್ನೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಸೇರಿದಂತೆ ಪ್ರತೀ ತಿಂಗಳು ಅವರ ಕುಟುಂಬಕ್ಕೆ 2 ಸಾವಿರ ಮಾಸಾಶನ ನೀಡುತ್ತಿದ್ದೇವೆ, ರಾಜ್ಯಾದ್ಯಂತ 2 ಲಕ್ಷ ಕೃಷಿ ಹೊಂಡ, ಕಡಲೇ ಕಾಯಿ ಬೆಳಿಗಾರರಿಗಾಗಿ 50 ಕೋಟಿ, ಕೊರಟಗೆರೆ ಕ್ಷೇತ್ರದ ಎತ್ತಿನ ಹೊಳೆ ಯೋಜನೆಗಾಗಿ 592 ಕೋಟಿ ವ್ಯಚ್ಚದಲ್ಲಿ 39 ಕೆರೆಗೆ ನೀರ ಹರಿಸುವ ಕೆಲಸ ಮಾಡಿರುವುದಾಗಿ ಹೇಳಿದರು.
ಪರಂ ಗೆಲ್ಲಬೇಕು:- ಕ್ಷೇತ್ರದಲ್ಲಿ ಪರಮೇಶ್ವರ್ ಈ ಬಾರಿ ಗೆಲ್ಲಲೇ ಬೇಕು… ಯಾವುದೇ ಜಾತಿ, ಮುಖಂಡರ ಮಾತಿಗೆ ಬೆಲೆ ಕೊಡಬೇಡಿ ನಮ್ಮಿಬ್ಬರ ನಡುವೆ ಯಾವುದೇ ಬಿನ್ನಾಭಿಪ್ರಾಯಗಳಿಲ್ಲ... ನಾವಿಬ್ಬರೂ ಅಣ್ಣತಮ್ಮಂದಿರು ಮತ್ತೊಮ್ಮೆ ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕೆ ಬರುತ್ತೇನೆ ಎಂದರು.
ನಮ್ದು ಕಾಮಕೀ ಬಾತ್:- ಮೋದಿಯವರು ಅಚ್ಚೇ ದಿನ್ ಆರಹಾಗೇ.. ಸಬ್ ಕೀ ಸಾತ್ ಸಬ್ ಕಾ ವಿಕಾಸ್… ಮನಕೀ ಬಾತ್ ಎಂದೆಲ್ಲಾ ಹೇಳುತ್ತಾ ಬರೀ ಕಾಲಿ ಮಾತುಗಳನ್ನಾಡುತ್ತಿದ್ದಾರೆ ಆದರೆ ನಮ್ಮದು ಕಾಮಕೀ ಬಾತ್ ಎಲ್ಲರೂ ಒಪ್ಪುವ ಮಾತು ಎಂದರು.
ಜೆಡಿಎಸ್ 25 !:- ಮುಖ್ಯಮಂತ್ರಿಯಾಗುತ್ತೀನಿ… ನನಗೆ ಮತ್ತೊಮ್ಮೆ ಆಶೀರ್ವಧಿಸಿ ಎಂದೆಲ್ಲಾ ಕುಮಾರಸ್ವಾಮಿ ಓಡಾಡುತ್ತಾ ಮಾಡಲಾಗದ ಭರವಸೆಗಳನ್ನು ಜನರಿಗೆ ನೀಡುತ್ತಿದ್ದಾರೆ ಜೆಡಿಎಸ್ ಗೆ ವ್ಯಾಪ್ತಿಯಿದೆ ಅದನ್ನು ಮೀರಿ ಇತರೆಡೆ ಅದರ ಅಸ್ಥಿತತ್ವವೂ ಇಲ್ಲಾ… ಕೇವಲ ಅವಕಾಶ ರಾಜಕಾರಣಕ್ಕಾಗಿ ಕಾಯುತ್ತಿದ್ದಾರೆ ಇದಕ್ಕೆ ಅವಕಾಶ ಕೊಡಬಾರದು ಕೇವಲ ರೈತರ ಮಕ್ಕಳು ಎಂದು ಹೇಳುತ್ತಾರೆ ಆದರೆ ರೈತರ ಪರವಾಗಿ ಇರುವಂತಹ ಎತ್ತಿನ ಹೊಳೆಯನ್ನು ತಡೆ ಇಡಿಯುತ್ತೇನೆ ಎಂದು ಹೇಳುತ್ತಿದ್ದಾರೆ ಇದು ಮಣ್ಣಿನ ಮಕ್ಕಳಾಡಬಹುದಾದ ಮಾತೇ ಎಂದು ಕುಟುಕಿದರು.
ಕೆಪಿಸಿಸಿ ಅಧ್ಯಕ್ಷರೂ ಆದ ಕೊರಟಗೆರೆ ಕ್ಷೇತ್ರದ ಅಭ್ಯರ್ಥಿ ಡಾ. ಜಿ ಪರಮೇಶ್ವರ್ ಮಾತನಾಡಿ ನಾನು ಸದಾಶಿವ ಆಯೋಗ ಜಾರಿಯ ವಿರೋಧಿ ಎನ್ನುವವರನ್ನೂ ನಂಬಬೇಡಿ ನಾನು ಇದರ ಪರವಾಗಿದ್ದೇನೆ ನಾನು ಎಂದೂ ಇದನ್ನು ವಿರೋಧಿಸುವ ಮಾತನಾಡಿಲ್ಲ ಬಾಬುಜಗಜೀವನ್ ರಾಮ್ ನಿಗಮವನ್ನು ನಾವೆಲ್ಲರೂ ಸೇರಿ ಮಾಡಿದ್ದೇವೆ ಎಂದರು.
ಜೆಡಿಎಸ್ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹುಡುಕುವುದು ದೊಡ್ಡ ಸಾಹಸ ನೀಮ್ಗೆ ಹಲವು ಕಡೆ ಅಭ್ಯರ್ಥಿಗಳೇ ಇಲ್ಲಾ ಈಗಿರುವುವಾಗ ಮುಖ್ಯಂತ್ರಿ ಕನಸು ಕಾಣುತ್ತಿರುವುದಾರು ಹೇಗೆ ಎಂದು ಪ್ರಶ್ನಿಸಿದರು.
ಹೇಳಬೇಡಿ ಕಾರಣ:- ನಾನು ಕ್ಷೇತ್ರದಲ್ಲಿ ಸೋತಿದ್ದೇನೆ… ಮತದಾರರು ನನ್ನ ಒಪ್ಪಿಲ್ಲ… ಆದರೆ ನನಗೆ ಬಂದ ಕಾರಣಗಳೇ ಬೇರೆ ಈ ಬಾರಿ ಅದ್ಯಾವುದೂ ಕಾರಣ ಬೇಕಿಲ್ಲ… ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಗಾಗಿ.. ನನ್ನನ್ನು ಗೆಲ್ಲಿಸಿ ನಾನು ನಿಮ್ಮೊಟ್ಟಿಗಿರುತ್ತೇನೆ ಎಂದು ಮನವಿ ಮಾಡಿದರು.
ಇಂಧನ ಸಚಿವ ಡಿ.ಕೆ ಶಿವಕುಮಾರ್ ಮಾತನಾಡಿ ಕಳೆದ ಚುನಾವಣೆಯಲ್ಲಿ ಮನೆಗೆ ಬಂದ ಲಕ್ಷ್ಮಿ ಮತ್ತು ಬೆಳಕನ್ನು ದೂರ ತಳ್ಳಿದ್ದೀರಿ ಆದರೆ ಈ ಬಾರಿ ಅಂತಹ ಎಡವಟ್ಟುಗಳನ್ನು ಮಾಡಿಕೊಳ್ಳಬೇಡಿ ಪರಮೇಶ್ವರ್ ಗೆ ಮತ ಹಾಕಿ ಎಂದರು.
ನಾನು ಸೇರಿದಂತೆ ಹಲವು ಕಾಂಗ್ರೇಸ್ ಪಕ್ಷದ ದೊಡ್ಡ ನಾಯಕರು ಕೊರಟಗೆರೆ ಕ್ಷೇತ್ರವನ್ನು ಬಿಟ್ಟು ಬಿಡಿ ಅಲ್ಲಿ ನಿಮಗೆ ಚೆನ್ನಾಗಿಲ್ಲ ಪುಲಿಕೇಶಿ ನಗರ, ಮಹದೇವಪುರ, ನೆಲಮಂಗಲ, ಮೂಡಗೆರೆ ಎಂದೆಲ್ಲಾ ಹತ್ತು ಹಲವು ಕ್ಷೇತ್ರಗಳನ್ನು ಸಿದ್ದ ಮಾಡಿದ್ರೂ ಸಹ ಪರಂ ಈ ಬಾರಿಯೂ ನಾನು ಕೊರಟಗೆರೆ ಕ್ಷೇತ್ರದಿಂದಲೆ ಸ್ಪರ್ಧಿಸುತ್ತೇನೆ ನನ್ನ ಹೆಣ ಹೊರೋರು ಅವರೇ ನನ್ನ ಪಲ್ಲಕ್ಕಿ ಹೊರೋರು ಅವರೇ ನಾನು ಅಲ್ಲೇ ಸ್ಪರ್ಧೆ ಮಾಡ್ತೀನಿ ಅಂತಾ ಹೇಳಿದ್ದಾರೆ ಕೊರಟಗೆರೆ ಜನ ಪರಮೇಶ್ವರ್ ಗೆ ಯಾವ ರೀತಿಯ ನ್ಯಾಯ ಕೊಡುತ್ತಿರೋ ಕೊಡಿ ಎಂದು ಹೇಳಿದರು.
ಕಾಂಗ್ರೇಸ್ ಪಕ್ಷ ನೂರಾರು ಜನ ಶಾಸಕರನ್ನು ತಯಾರು ಮಾಡಬಹುದು ಆದರೆ ಪರಂ ನಂತ ವ್ಯಕ್ತಿಯನ್ನು ತಯಾರು ಮಾಡುವುದು ಕಷ್ಟ ಅದೇ ರೀತಿ ಕಾಂಗ್ರೇಸ್ ಪಕ್ಷದಲ್ಲಿ ಪರಂ ಚುನಾವಣೆಯಲ್ಲಿ ಸೋತರೂ ಪಕ್ಷದಲ್ಲಿ ಸ್ಥಾನ ಇದ್ದೇ ಇರುತ್ತದೆ ಆದರೆ ಕ್ಷೇತ್ರದಲ್ಲಿ ಮತದಾರ ಗೌರವ ಮತ್ತು ಕ್ಷೇತ್ರಕ್ಕೆ ಅವಮಾನವಾಗಲಿದ್ದು ಇದರಿಂದ ಕ್ಷೇತ್ರ ಮುಕ್ತವಾಗಲಿ ಎಂದು ನುಡಿದರು.
ಯಡ್ಯೂರಪ್ಪ ಕೊಟ್ಟಿದ್ದು ಸೈಕಲ್ ಮತ್ತು ಸೀರಿ… ಕುಮಾರಸ್ವಾಮಿ ಮಾಡಿದ್ದು ಬರೀ ಗ್ರಾಮವಾಸ್ತವ್ಯ ಆದ್ರ ಕಾಂಗ್ರೇಸ್ ಪಕ್ಷ 4 ಕೋಟಿ ಬಡವರಿಗೆ ಬಿಪಿಎಲ್ ಕಾರ್ಡ್ ನೀಡುವುದರೊಂದಿಗೆ ಹಸಿವು ಮುಕ್ತ ರಾಜ್ಯ ಸೇರಿದಂತೆ ಹಲವು ಭಾಗ್ಯಗಳನ್ನು ನೀಡಿದ್ದು ಇಡೀ ದೇಶದಲ್ಲಿಯೇ 20 ಸಾವಿರ ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಪಾವಗಡದಲ್ಲಿ ಅದೂ ಜಿಲ್ಲೆಯನ್ನು ದೇಶದ ಭೂಪದಲ್ಲಿ ಕಾಣುವಂತೆ ಮಾಡಿದೆ ಆದ್ದರಿಂದ
Comments