ಸಿ.ಎಂ ಸಿದ್ದುಗೆ ಮುತ್ತಿಗೆ ಹಾಕಿದ ಡಿಎಸ್ಎಸ್ ಸದಸ್ಯರು
ಕೊರಟಗೆರೆ - ದಲಿತ ಸಂಘರ್ಷ ಸಮಿತಿ ಸದಸ್ಯರು ಭಾನುವಾರ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಬಂದಿದ್ದ ಸಿ.ಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ನ್ನು ಸದಾಶಿವ ಆಯೋಗ ಅನುಷ್ಠಾನಕ್ಕೆ ಒತ್ತಾಯಿಸಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಸದಾಶಿವ ಆಯೋವನ್ನು ಬೆಂಬಲಿಸಿ ಕೇಂದ್ರ ಸರ್ಕಾರಕ್ಕೆ ಶೀಫಾರಸ್ಸು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೇಬಲ್ ರಘು, ಮಾದಿಗ ದಂಡೋರ ಯುವ ಸೇನೆಯ ಜಿಲ್ಲಾಧ್ಯಕ್ಷ ಜೆಟ್ಟಿ ಅಗ್ರಹಾರ ನಾಗರಾಜು ಮತ್ತು ಪೊಲೀಸರ ನಡುವ ಮಾತಿನ ಜಕಮಕಿ ನಡೆದು ವಿಕೋಪಕ್ಕೆ ಹೋಗಿ ಜಿಲ್ಲಾ ಸಂಚಾಲಕ ಕೇಬಲ್ ರಘುಗೆ ಪೊಲೀರು ಹಲ್ಲೆ ನಡೆಸಿದ್ದು ಗಾಯಗಳಾಗಿವೆ.
ಪ್ರತಿಭಟನೆ ನಿರತರನ್ನು ಬಂದಿಸಿ ಕೊರಟಗೆರೆ ಕಾರ್ಯಕ್ರಮ ಮುಗಿಯುವರೆಗೆ ಬಂಧನದಲ್ಲಿ ಇಟ್ಟುಕೊಂಡು ನಂತರ ಬಡವನಹಳ್ಳಿ, ಮಿಡಗೇಶಿ, ಪಾವಗಡ ಠಾಣೆಗಳಿಗೆ ಕರೆದೊಯ್ದು ಸಂಜೆ ಕೊರಟಗೆರೆ ಠಾಣೆಗೆ ಕರೆದಂದು ವಿಚಾರಣೆ ನಡೆಸಿದ್ದಾರೆ.
ದಲಿತ ಸಂಘರ್ಷ ಜಿಲ್ಲಾ ಸಂಚಾಲಕ ಹೆಬ್ಬೂರು ಗಾಂಧೀರಾಜು, ಕಣಿಮಯ್ಯ, ಸದಸ್ಯ ನರಸಯ್ಯ, ಮಾದಿಗ ದಂಡೋರದ ಪ್ರಧಾನ ಕಾರ್ಯರ್ಶಿ ಜಿಸಿಬಿ ವೆಂಕಟೇಶ್, ಸೇರಿದಂತೆ 12 ಜನರನ್ನು ಬಂಧನದಲ್ಲಿರಿಸಿ ನಂತರ ಬಿಡುಗಡೆ ಮಾಡಲಾಗಿದೆ.
Comments