ಶ್ರೀರಾಮ,ಹನುಮ ಹಾಗೂ ಶಿವಾಜಿ ಪ್ರತಿಮೆಗಳೊಂದಿಗೆ ಅದ್ದೂರಿಯಾಗಿ ನಡೆದ ಶೋಭಾಯಾತ್ರೆ

11 Mar 2018 5:41 PM |
612 Report

ವಿಶ್ವ ಹಿಂದೂ ಪರಿಷತ್, ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡ ಇವರಿಂದ ಆಯೋಜಿಸಲಾಗಿದ್ದ ಶ್ರೀರಾಮ, ಹನುಮ ಹಾಗೂ ಶಿವಾಜಿ ಪ್ರತಿಮೆಗಳೊಂದಿಗೆ ಅದ್ದೂರಿ ಶೋಭಾಯಾತ್ರೆ ಮಧ್ಯಾನ್ಹ 1 ಘಂಟೆಗೆ ಸರಿಯಾಗಿ ಹೊರಟು ನಗರದ ತಾಲ್ಲೂಕು ಆಫೀಸ್ ವೃತ್ತ, ರುಮಾಲೆ ವೃತ್ತ, ವಿಠೋಭ ರಸ್ತೆಯ, ಸೌಂದರ್ಯಮಹಲ್ ವೃತ್ತ, ಹಳೇಬಸ ನಿಲ್ದಾಣ, ರಾಜಕಮಲ್ ಚಿತ್ರಮಂದಿರ, ಶ್ರೀ ಲಕ್ಷ್ಮಿ ಚಿತ್ರಮಂದಿರದ ಮುಖಾಂತರ ಚೌಡೇಶ್ವರಿಗುಡಿ ಬೀದಿ, ತೇರಿನಬೀದಿ, ಮುಖ್ಯರಸ್ತೆ, ಚೌಕ, ಕಾಳಮ್ಮ ದೇವಸ್ಥಾನ, ಕಲ್ಲುಪೇಟೆಯಿಂದ ಕಾಲೇಜ್ ರಸ್ತೆ, ಕರೇನಹಳ್ಳಿ ಮಾರ್ಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವೈಭವಯುತವಾಗಿ ವಿಜೃಂಭಣೆಯಿಂದ ಪಿ.ಎಲ್.ಡಿ.ಬ್ಯಾಂಕ್ ಎದುರು ಇರುವ ಮೈದಾನದಲ್ಲಿ ಸಂಜೆ 5 ಘಂಟೆಗೆ ಮುಕ್ತಾಯಗೊಂಡಿತು.

Edited By

Ramesh

Reported By

Ramesh

Comments