ಜೆಡಿಎಸ್ ಬಂಡಾಯ ಶಾಸಕ ಬಾಲಕೃಷ್ಣ ಗೆ ಶುರುವಾಗಿದೆ ಶನಿಕಾಟ..!!



ಇಪ್ಪತ್ತುವರ್ಷಗಳ ಕಾಲ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೆ ಒಂದು ತನ್ನದು ಎಂದು ಗುರುತರವಾದ ಅಭಿವೃದ್ಧಿಯ ಸಾಕ್ಷಿಗುಡ್ಡೆಯನ್ನು ತೋರಿಸದೆ ಕಾಲಯಾಪನೆ ಮಾಡಿ ಚುನಾವಣೆ ವೇಳೆ ಹಳ್ಳಿ ಹಟ್ಟಿ ಬೀದಿ ರಸ್ತೆ ಚರಂಡಿಗೆ ಪೊಳ್ಳು ಗುದ್ದಲಿ ಪೂಜೆಗೆ ನಿಲ್ಲುವ ಶಾಸಕ ಎಚ್.ಸಿ.ಬಾಲಕೃಷ್ಣ ಕ್ಷೇತ್ರದ ಮತದಾರರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಇಪ್ಪತ್ತುವರ್ಷಳಿಂದ ಏನನ್ನೂ ಮಾಡದೆ ಅಷ್ಟೂ ವರ್ಷಗಳ ಕೆಲಸವನ್ನು ಕೇವಲ ಒಂದೂವರೆ ತಿಂಗಳಲ್ಲಿ ನೂರಾರು ಗುದ್ದಲಿಪೂಜೆಗಳನ್ನು ನೆರವೇರಿಸುತ್ತಾ ಮತದಾರರ ಕಣ್ಣಿಗೆ ಚುನಾವಣಾಪೂರ್ವದಲ್ಲಿಯೇ ಮಣ್ಣೆರಚುತ್ತಿದ್ದಾರೆ ಎಂಬ ಆಪಾದನೆ ಸ್ವಯಂ ಹಳ್ಳಿಯ ಜನರೆ ಮಾತನಾಡುತ್ತಿರುವುದು ಶಾಸಕರ ಜನಪ್ರಿಯತೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ಹಳ್ಳಿಯ ನಮ್ಮ ಕಾರ್ಯಕರ್ತರನ್ನು ಶಾಸಕರು ಮಾತನಾಡಲು ಹೋಗುತ್ತಾರೆ.ಅಲ್ಲಿ ಯಾವುದೊ ಹಳೆಯ ಕಾಮಗಾರಿ ಅರ್ಧಕ್ಕೆ ನಿಂತಿದ್ದರು ಕೂಡ ಅಲ್ಲಿ ಹತ್ತಿರದ ಮನೆಯಿಂದ ಹಾರೆಕೋಲು,ಗುದ್ದಲಿಯನ್ನು ತರಿಸಿ ಗ್ರಾಮದ ದೇವರಗುಡಿಯ ಅರ್ಚಕರನ್ನು ದಿಢೀರನೆ ಕರೆದು ಗುದ್ದಲಿಪೂಜೆ ಮಾಡಿ ಮೊಬೈಲ್ನ ಲ್ಲಿ ಫೊಟೊತೆಗೆದು ವಾಟ್ಸಾಪ್,ಫೇಸ್ಬುದಕ್ಗೆಿ ಹಾಕಿಸಿ ಪ್ರಚಾರ ಪಡೆಯುವಂತಾಗಿದೆ. ಕೆಲವು ಹಳ್ಳಿಗಳ ಹೊರಗೆ ಬಂದಾಗ ರಸ್ತೆ ನಡುವೆ ನಡೆದು ಹೋಗುವ ವ್ಯಕ್ತಿಗೆ ಕಾರು ನಿಲ್ಲಿಸಿ ಇಳಿದು ಕೈಮುಗಿವ ಹೊಸಾಪರಂಪರೆಯನ್ನು ಮೈಗೂಡಿಸಿಕೊಂಡಿದ್ದಾರೆ ಶಾಸಕರು.ಗೆದ್ದಮೇಲೆ ನಾಲ್ಕುವರ್ಷ ಕಾರಿನಲ್ಲಿ ಭರ್ರನೆ ಧೂಳೆಬ್ಬಿಸಿ ಸಾಗುವ ಅವರು ಈಗ ಕಾರು ಇಳಿದು ಬಂದರೆಂದರೆ ಚುನಾವಣೆ ಹತ್ತಿರ ಬಂದಿದೆ ಎಂದು ತಿಳಿಯುವ ಹಂತ ಗ್ರಾಮಸ್ಥರದ್ದು. ಮಾಗಡಿ ಪಟ್ಟಣಕ್ಕೆ ಮಂಚನಬೆಲೆ ಶಾಶ್ವತ ಕುಡಿಯುವ ನೀರು ಯೋಜನೆ ತಂದಾಗ ಅದು ಸಾಧ್ಯವೇ ಇಲ್ಲ ಎಂದು ಹೇಳಿಕೆ ನೀಡಿದ ಬಾಲಕೃಷ್ಣರ ಮುಂದೆಯೇ ಅಂದಿನ ಎಂ.ಭೋಗೇಶ್ ಪುರಸಭಾಧ್ಯಕ್ಷರಾಗಿದ್ದಾಗ ಎಚ್.ಎಂ.ರೇವಣ್ಣ ಕೊಟ್ಟ ಮಂಚನಬೆಲೆ ಕುಡಿಯುವ ನೀರಿನ ಯೋಜನೆಯನ್ನು ಇಂದು ಸಮರ್ಪಕವಾಗಿ ನಿರ್ವಹಿಸಲಾಗದ ಶಾಸಕ ಅದೂ ಇದೂ ರಿಪೇರಿ ಎಂದು ದುಡ್ಡುಹೊಡೆದು ತಿನ್ನಲು ಹಾಕಿಕೊಟ್ಟ ಯೋಜನೆಯಾಗಿ ಪರಿವರ್ತನೆ ಮಾಡಿಕೊಂಡರೆ ಹೊರತು ಜನಪರವಾದ ಕೆಲಸವಾಗಲಿಲ್ಲ.
ಬಡಪಾಯಿ ಬೋವಿ ಸಮುದಾಯದ ಇಬ್ಬರು ಸೋದರರು ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡಿಕೊಂಡು ಬದುಕುತ್ತಿದ್ದವರನ್ನು ಟಾರ್ಗೇಟ್ ಮಾಡಿ 650 ಕೋಟಿ ಹಗರಣದಲ್ಲಿ ಅವರನ್ನು ಸಿಲುಕಿಸಿ ಅದನ್ನು ಸಾಬೀತು ಪಡಿಸಿದರೆ ಚಪ್ಪಲಿಹಾರ ಹಾಕಿಕೊಳ್ಳುವುದಾಗಿ ಬಹಿರಂಗ ಸವಾಲು ಎಸೆದರು. ದುರಂತವೆಮದರೆ ಅದೇ ಹಗರಣದಲ್ಲಿ ಅನೇಕ ಅಧಿಕಾರಿಗಳು ಕಳ್ಳಬಿಲ್ಲಿಗೆ ಸಹಿ ಹಾಕಿದ ಕಾರಣ ಆತ್ಮಹತ್ಯೆ ಮಾಡಿಕೊಂಡು ಸ್ವರ್ಗ ಸೇರಿದರು. ಜೊತೆಗೆ ಬೋವಿ ಸಮುದಾಯದ ಎ1 ಗುತ್ತಿಗೆದಾರರು ಒಬ್ಬರು ಇಬ್ಬರು ಅಲ್ಲ ಮೂವರು ಕಳ್ಳ ಬಿಲ್ಲು ಕೇಸಿನಲ್ಲಿ ಸಿಲುಕಿದರು.ಸಿಕ್ಕಿಹಾಕಿಸಿದ್ದು ಶಾಸಕ ಬಾಲಕೃಷ್ಣ ಬಚಾವು ಮಾಡುವೆ ಎಂದು ಹೇಳಿ ಕೈಕೊಟ್ಟರು.ವಿರೋಧ ಪಕ್ಷಗಳು ಅದನ್ನು ಬಂಡವಾಳ ಮಾಡಿಕೊಂಡವು.ಮೊದಲಿಗೆ 57 ಕೋಟಿ ಮರುಪಾವತಿ ಮಾಡಿ ಎಂದು ಸರಕಾರ ನೋಟೀಸ್ ಕೊಟ್ಟಿತು.ಅದಕ್ಕೆ ಕಳ್ಳಬಿಲ್ಲು ಕಾಮಗಾರಿಯ ಕೇಸಿನಲ್ಲಿ ಅಷ್ಟುಹಣವನ್ನು ತಿಂದವರು ಜನಪ್ರತಿನಿಧಿಗಳು.ಸಿಕ್ಕಿಹಾಕಿಕೊಂಡವರು ಗುತ್ತಿಗೆ ದಾರರು. ಈಗ ಜನಪ್ರತಿನಿಧಿ ಹಣ ಸರಕಾರಕ್ಕೆ 57 ಸಾವಿರ ಕಟ್ಟುವವರನ್ನು ಐದು ಕೋಟಿ ಕಟ್ಟಿ ನಾನು ಇನ್ನೂ ಶಾಸಕನಾಗಿರುವೆ ಬಚಾವು ಮಾಡುವೆ ಮುಂದಿನ ಬಾರಿ ಗೆಲ್ಲಿಸಿ ಎಲ್ಲವನ್ನೂ ಮನ್ನಾ ಮಾಡಿಸುವೆ ಎಂದರೆ ಇದೇನು ರೈತರ ಸಾಲವೆ ಮೂರುಜನ ಗುತ್ತಿಗೆದಾರರ 650 ಕೋಟಿಯಲಿ 350 ಕೋಟಿ ಹಣ ಹಿಂತಿರುಗಿಸುವವರು 57 ಕೋಟಿಯಲ್ಲಿಯೂ ಪ್ರಾರಂಭಿಕ ಮೊತ್ತ ಅದರಲ್ಲಿಯೂ ಐದು ಕೋಟಿ ಇದು ಯಾವ ಸೀಮೆ ನ್ಯಾಯ? ಈ ಬಗ್ಗೆ ಮಾಗಡಿ ಮತದಾರರಿಗೆ ಎಲ್ಲವೂ ಅರಿವಾಗಿದೆ.ಅದರಿಂದಾಗಿ 650 ಕೋಟಿ ಹಗರಣ ಮತ್ತು ಕೊಳವೆ ಬಾವಿಯ 25 ಕೋಟಿ ಹಗರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಚುನಾವಣೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಸೋಲುವುದೆ ಈ ಹಗರಣಗಳಿಂದ ಎಂಬ ಮಾತು ಜನಜನಿತವಾಗಿದೆ. ಗುದ್ದಲಿ ಪೂಜೆ ಇವೆಲ್ಲವೂ ಸಾರ್ವತ್ರಿಕವಾಗಿ ಬಹುದೊಡ್ಡ ನಾಟಕ ಎಂಬುದನ್ನು ಜನರು ಮನಗಂಡಿದ್ದಾರೆ.ಚುನಾವಣೆಯಲ್ಲಿ ಗೆಲ್ಲುವ ಮನೋಭಾವದಿಂದ ಹೊರಬಂದು ನಿಜವಾದ ರಾಜಕಾರಣಕ್ಕೆ ಕೈಹಾಕಿ.ಬೆದರಿಕೆ,ಪೊಲೀಸ್ ಕೇಸುಗಳಿಂದ ಯಾವುದೆ ಕಾರಣಕ್ಕೂ ನೀವು ಮಾಗಡಿಯ ಮತದಾರರನ್ನು ಗೆಲುವುದು ಅಸಾಧ್ಯ. ಜನ ಎಚ್ಚೆತ್ತುಕೊಂಡಿದ್ದಾರೆ. ನಾಟಕ,ಗುದ್ದಲಿಪೂಜೆಯಂತಹ ಬಯಲು ನಾಟಕ ಇವೆಲ್ಲವನ್ನೂ ಬಲ್ಲವರಾಗಿದ್ದಾರೆ. ಈಗ ನೀವು ಚುನಾವಣೆಯಿಂದ ಕಾಲು ಹಿಂದಿಡುವುದೊಂದೆ ನಿಮಗಿರುವ ಚಾಯ್ಸ್. ನಿಮ್ಮೆಲ್ಲಾ ಬಂಡವಾಳ ಮತದಾರನ ಅರಿವಿಗೆ ಇದೆ. ನಿಮ್ಮ ಜೊತೆ ಹಳೆಯ ನವಗ್ರಹಗಳು ನಿಮ್ಮೊಂದಿಗೆ ಏಕಿಲ್ಲ? ಅಂದರೆ ನಿಮಗೆ ಈಗ ಸಾಡೇಸಾತಿ ಶನಿಕಾಟವಿದೆ. ನೀವು ಯಾರ ಜೊತೆ ಸೇರುವಿರೋ ಅವರಿಗೆ ಕಂಟಕಗಳಿವೆ ಅದರಿಂದಲೆ ಡಿಕೆ.ಶಿವಕುಮಾರ ನಿಮಗೆ ಕಾಂಗ್ರೆಸ್ ಟಿಕೇಟು ಕೊಡಿಸಲು ಮುಂದೆ ಬಂದಾಗ ಅವರಿಗೆ ನಿಮ್ಮ ನೆರಳಿನ ಪ್ರಭಾವ ಐಟಿ ರೈಡಾಗಿ ಇನ್ನೂ ತೊಂದರೆ ಅನುಭವಿಸುತ್ತಿದ್ದಾರೆ. ಶನಿಕಾಟ ಅದು ನಿಮ್ಮಿಂದ ಡಿಕೆ ಶಿವಕುಮಾರ್ ಗೆ ಹೋಗಿದೆ.ಈಗ ಬಿಎಸ್ವೈ ಗೆ ಟ್ರಾನ್ಸಫರ್ ಆಗುತ್ತಿರುವುದಕ್ಕೆ ಕರ್ನಾಟಕದ ಜನರೆಲ್ಲರೂ ಖುಷಿಯಿಂದಿದ್ದಾರೆ. ಅದಕ್ಕೆ ಕೊನೆಯಲಿ ನಮ್ಮ ಸಲಹೆಯೆಂದರೆ ಚುನಾವನೆಯಿಮದ ಹಿಂದೆ ಸರಿದು ಮಾನ ಉಳಿಸಿಕೊಳ್ಳಿರಿ ಇಲ್ಲವೆಂದರೆ ಸೋಲು ಖಚಿತ ಎಂದು ಮೂಲಗಳು ತಿಳಿಸಿವೆ.
Comments