ಕರ್ನಾಟಕದ ಇತಿಹಾಸವನ್ನು ಮರುಸೃಷ್ಟಿಸಿದ ಜೆಡಿಎಸ್ ಸಮಾವೇಶ





ಚುನಾವಣೆಗಳು ಬಂತೆಂದರೆ ಸಮಾವೇಶಗಳು ಸಾಮಾನ್ಯ. ಚುನಾವಣೆಗೆ ಒಂದು ವರ್ಷವಿರುವಾಗಲೇ ಸಮಾವೇಶಗಳ ಪರ್ವ ಆರಂಭವಾಗುತ್ತವೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳು ಸಮಾವೇಶಗಳನ್ನು ಯಶಸ್ವಿಯಾಗಿ ನಡೆಸುತ್ತಿವೆ. ಕೆಲವೇ ದಿನಗಳಲ್ಲಿ ಚುನಾವಣಾ ಆಯೋಗ, ಚುನಾವಣಾ ದಿನಾಂಕ ಪ್ರಕಟಿಸಲಿದೆ. ನಂತರ ಚುನಾವಣೆಗಾಗಿ ರಾಜಕೀಯ ಪಕ್ಷಗಳಿಗೆ ಚುನಾವಣಾ ತಯಾರಿಗಾಗಿ ಸುಮಾರು 40ರಿಂದ 50 ದಿನಗಳ ಕಾಲಾವಕಾಶವನ್ನು ನೀಡಲಾಗುತ್ತದೆ.
ಫೆಬ್ರವರಿ 17 ರಂದು ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ಆಯೋಜಿಸಿದ್ದ ಸಮಾವೇಶ ಕೇವಲ ಜೆಡಿಎಸ್ ಅಥವಾ ಜನತಾ ಪಕ್ಷವೇ ಅಲ್ಲದೇ, ದಾಖಲೆಗಳ ಪ್ರಕಾರ ಕರ್ನಾಟಕದ ಇತಿಹಾಸದಲ್ಲೇ ಅತಿ ಹೆಚ್ಚು ಜನ ಸೇರಿದ್ದ ಸಮಾವೇಶ. ಸುಮಾರು 8 ಲಕ್ಷಕ್ಕೂ ಹೆಚ್ಚು ಜನರಿದ್ದ ಸಮಾವೇಶವನ್ನು ಉದ್ದೇಶಿಸಿ ಕುಮಾರಸ್ವಾಮಿ, ದೇವೇಗೌಡ ಹಾಗು ಮಾಯಾವತಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು. ಎಚ್.ಡಿ. ದೇವೇಗೌಡ ಹಾಗು ಎಚ್.ಡಿ. ಕುಮಾರಸ್ವಾಮಿ ಅವರನ್ನು ಹೊರತುಪಡಿಸಿದರೆ, ಮತ್ಯಾರಿಗೂ ದೊಡ್ಡ ಮಟ್ಟದ ಸಮಾವೇಶ ನಡೆಸುವ ಸಾಮರ್ಥ್ಯವಿದ್ದಂತಿಲ್ಲ. ಕುಮಾರ ಪರ್ವ ಹೆಸರಿನಲ್ಲಿ ಜೆಡಿಎಸ್ ಈ ಬಾರಿಯ ಚುನಾವಣೆ ಪ್ರಚಾರ ಕೈಗೊಂಡಿದೆ. ಇದೇ ಹೆಸರಿನಲ್ಲಿ ಸಮಾವೇಶಗಳನ್ನು ಮಾಡುತ್ತಿದೆ. ಜೆಡಿಎಸ್ ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸುಮಾರು 40 ರಿಂದ 50 ಕ್ಷೇತ್ರಗಳಲ್ಲಿ 'ಕುಮಾರ ಪರ್ವ' ಹೆಸರಿನ ರೋಡ್ ಷೋ ಹಾಗು ಸಮಾವೇಶಗಳನ್ನು ನಡೆಸಿದ್ದಾರೆ. ಸಾಮಾನ್ಯವಾಗಿ ದೊಡ್ಡ ಗಾತ್ರದ ಸಮಾವೇಶವೆಂದರೆ ಸುಮಾರು 80 ಸಾವಿರದಿಂದ 1 ಲಕ್ಷದವರೆಗೆ ಜನರನ್ನು ಸೇರಿಸುವುದು ಸಾಧ್ಯವಾಗುತ್ತದೆ. ಆದರೆ, ಜೆಡಿಎಸ್ ಪಕ್ಷ ಐತಿಹಾಸಿಕ ಸಮಾವೇಶವನ್ನು ನಡೆಸುವ ಮೂಲಕ ರಾಜ್ಯದ ಜನರ ಗಮನವನ್ನು ಸೆಳೆದಿದೆ. ಬೆಂಗಳೂರು ಹೊರವಲಯದಲ್ಲಿ ನಡೆದ ಸಮಾವೇಶದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ಸುಮಾರು 500 ಕ್ಕೂ ಹೆಚ್ಚು ಬಸ್ಸುಗಳು ಸಂಚಾರ ದಟ್ಟಣೆಯಿಂದ ಸಮಾವೇಶ ಸ್ಥಳವನ್ನೂ ತಲುಪಲಾಗದೆ ಹಿಂದಿರುಗಿದ ಘಟನೆಯೂ ನಡೆಯಿತು. ಜೆಡಿಎಸ್ ಎಲ್ಲಿದೆ?, ಜೆಡಿಎಸ್ ನಮಗೆ ಎಂದಿಗೂ ಪ್ರತಿಸ್ಪರ್ದಿಯಾಗಲಾರದು ಎಂದು ಹೇಳುತಿದ್ದ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ನ ವಿರೋಧಿ ಬಣಗಳಿಗೆ ಅತಿದೊಡ್ಡ ಸಮಾವೇಶ ಕಂಡು ನಡುಕ ಉಂಟಾಗಿತ್ತು.ಈ ಎಲ್ಲ ಬೆಳವಣಿಗೆಯನ್ನು ನೋಡಿದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಭರ್ಜರಿ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಎರಡು ಮಾತಿಲ್ಲ ಎಂದು ಮೂಲಗಳು ತಿಳಿಸಿವೆ.
Comments