ಪುಷ್ಪಾಂಡಜ ಮಹರ್ಷಿ ಆಶ್ರಮ, ತಪಸಿಹಳ್ಳಿಯಲ್ಲಿ 6ನೇ ತರಗತಿಯಿಂದ 10 ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗಾಗಿ ಬೇಸಿಗೆ ಶಿಬಿರ

07 Mar 2018 3:38 PM |
1519 Report

ದೊಡ್ಡಬಳ್ಳಾಪುರ ತಾಲ್ಲೂಕಿನ ತಪಸಿಹಳ್ಳಿಯಲ್ಲಿರುವ ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮದಲ್ಲಿ ಏಪ್ರಿಲ್ 8ರ ಭಾನುವಾರದಿಂದ 15 ನೇ ಭಾನುವಾರ 2018 ರವರೆಗೆ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ, ಶಿಬಿರದಲ್ಲಿ ಮಕ್ಕಳಿಗೆ ಯೋಗ, ಚಿತ್ರಕಲೆ, ಕುಸುರಿಕೆಲಸ, ಪೇಪರ್ ಡಿಸೈನ್ ಕಟ್ಟಿಂಗ್, ಭಗವದ್ಗೀತೆ, ಮೆಡಿಟೇಷನ್, ಸ್ಟಾರ್ ಗೇಜಿಂಗ್ ಇನ್ನು ಮುಂತಾದ ತರಗತಿಗಳನ್ನು ನುರಿತ ಅಧ್ಯಾಪಕರಿಂದ ಕಲಿಸಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ, 70 ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ, ಆಹಾರ ಮತ್ತು ವಸತಿಸೇರಿ ಒಬ್ಬರಿಗೆ 1,500. ರೂ ಮಾತ್ರ. ಶಿಬಿರದಲ್ಲಿ ಭಾಗವಹಿಸುವ ಮಕ್ಕಳು ತಮ್ಮೊಂದಿಗೆ ಬಟ್ಟೆ, ನೋಟ್ ಪುಸ್ತಕ, ಬೆಡ್ ಶೀಟ್ ಮತ್ತು ಸ್ನಾನದ ಕಿಟ್ ತರಬೇಕು. ಆಸಕ್ತ ಪೋಷಕರು ಆಶ್ರಮದ ಕಾರ್ಯಾಲಯದಲ್ಲಿ ಸಂಪರ್ಕಿಸುವುದು. ತರಬೇತಿ ಸಮಯದಲ್ಲಿ ಶಿಬಿರಕ್ಕೆ ಪೋಷಕರು ಭೇಟಿನೀಡಬಹುದು, ಉಳಿದುಕೊಳ್ಳಲು ಅವಕಾಶವಿರುವುದಿಲ್ಲ.

contact: secretry- 8618502157

Edited By

Ramesh

Reported By

Ramesh

Comments