ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ವಿಜೃಂಭಣೆಯಿಂದ ನಡೆದ ಪುಷ್ಪಯಾಗ
ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಸರಾಂತ ದೇವಾಲಯ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ಇಂದು ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ರಾಮನಾಥಶರ್ಮ ಮತ್ತು ತಂಡದವರಿಂದ ಶ್ರೀ ಸ್ವಾಮಿಯವರಿಗೆ ಪುಷ್ಪಯಾಗವನ್ನು ಹಮ್ಮಿಕೊಳ್ಳಲಾಗಿತ್ತು, ದೇವಾಲಯದ ಅರ್ಚಕವೃಂದದ ಸಹಾಯದೊಂದಿಗೆ ಸ್ವಾಮಿಯವರಿಗೆ ವಿವಿಧ ಬಗೆಯ ಹೂವುಗಳಿಂದ ಪುಷ್ಪಾರ್ಚನೆ ನಡೆಸಲಾಯಿತು. ಬೆಳಿಗ್ಗೆ 6ರಿಂದ ಹೋಮ ಪೂಜಾದಿಗಳೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಮದ್ಯಾನ್ಹ 2-30 ಕ್ಕೆ ಮಹಾಮಂಗಳಾರತಿ, ಪ್ರಸಾದವಿನಿಯೋಗದೊಂದಿಗೆ ಮುಕ್ತಾಯಗೊಂಡಿತು. ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ಪುಷ್ಪಯಾಗವನ್ನು ಕಣ್ತುಂಬಿಕೊಂಡರು.
Comments