ಪಕ್ಷದೊಳಗಿನ ಭಿನ್ನಮತದ ಬಗ್ಗೆ ಒಪ್ಪಿಕೊಂಡ ಬುದ್ದಿವಂತ
ನಾವು ಜನರಿಗೆ ನೀಡಿದ ಭರವಸೆಯಂತೆ ಹಣವಿಲ್ಲದೆ ವಿಚಾರಗಳನ್ನ ಜನರ ಮುಂದಿಟ್ಟು ಪಕ್ಷ ಮುನ್ನಡೆಸಲು ನಿರ್ಧರಿಸಿದ್ದೆ. ಆರಂಭದಲ್ಲಿ ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದರು. ತಮ್ಮ ಕ್ಷೇತ್ರದಲ್ಲಿನ ಪರಿಸ್ಥಿತಿ ಅಧ್ಯಯನ ಮಾಡಿಕೊಂಡು ಬಂದವರಿಗೆ ಟಿಕೆಟ್ ಕೊಡಲು ನಿರ್ಧರಿಸಿದ್ದೆವು.
ಅದರಂತೆ, 150ಕ್ಕೂ ಅಧಿಕ ಮಂದಿ ನಮ್ಮ ಬಳಿಗೆ ಬಂದಿದ್ದಾರೆ. ಅವರನ್ನ ಸಂದರ್ಶನ ಮಾಡಿ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿದ್ದೆವು. ಒಂದೂವರೆ ತಿಂಗಳು ಎಲ್ಲವೂ ಸುಗಮವಾಗಿಯೇ ನಡೆಯಿತು. ಇನ್ನೇನು ಪ್ರಚಾರಕ್ಕೆ ತೆರಳಬೇಕೆನ್ನುವಷ್ಟರಲ್ಲಿ ಈ ಸಮಸ್ಯೆ ಉದ್ಭವಿಸಿವೆ. ಬೇಕು ಬೇಕಾದವರಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ನೇಮಿಸುತ್ತಿದ್ದರು. ಅಷ್ಟು ದಿನಗಳ ಕಾಲ ದುಡಿದವರನ್ನ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದರು, ಆದರೆ, ಇದನ್ನ ನಾನು ವಿರೋಧಿಸಿದ್ದೆ. ಹೀಗಾಗಿ, ಸಹಿ ಅಧಿಕಾರ ನನಗೆ ಕೊಡಿ ಎಂದು ಕೇಳಿದೆ.
ಅಷ್ಟರೊಳಗೆ ನಾನು ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದೇನೆ ಎಂದು ಮಾಧ್ಯಮದ ಮುಂದೆ ಹೋದರು ಎಂದು ಉಪೇಂದ್ರ ತಿಳಿಸಿದ್ಧಾರೆ. ನಾನು ನಾಯಕ ಅಲ್ಲ. ನನಗೆ ಕಾರ್ಮಿಕರು ಬೇಕು. ನಾನು ಆಯ್ಕೆ ಮಾಡಿದವ್ರುನ್ನು ಅಪಹಾಸ್ಯ ಮಾಡ್ತಿದ್ದಾರೆ. ನಾನು ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ 20 ವೋಟ್ ಬೀಳಲ್ಲ ಅಂತ ಹೇಳಿದಾಗ ನನಗೆ ಎಷ್ಟು ಬೇಜಾರಾಗುತ್ತೆ ಎಂದು ಉಪೇಂದ್ರ ಅಸಮಾಧಾನ ಹೊರ ಹಾಕಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಪಕ್ಷದ ಅಭ್ಯರ್ಥಿಗಳ ಸಭೆ ಕರೆದಿರುವ ಉಪೇಂದ್ರ, ಅವರಿಗೆ ತಮ್ಮ ನಿಲುವು ತಿಳಿಸಲಿದ್ದಾರೆ. ಸಭೆಯಲ್ಲಿ ಭಿನ್ನಮತದ ಕುರಿತಂತೆ ಚರ್ಚೆ ನಡೆಸುತ್ತಿದ್ದಾರೆ. ಸಭೆ ಬಳಿಕ ಉಪೇಂದ್ರ ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
Comments