ದೊಡ್ಡಬಳ್ಳಾಪುರದಲ್ಲಿ ಕೈಮಗ್ಗ ಪಾರ್ಕ್, ನೇಕಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೇವಾಂಗ ಮಹಾ ಸಮ್ಮೇಳನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ







ರಾಜ್ಯದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದರೆ ನೇಕಾರರ ಅಭಿವೃದ್ಧಿ ನಿಗಮಕ್ಕೆ ಪ್ರತ್ಯೇಕವಾಗಿ 1೦೦ ಕೋಟಿ ರೂಪಾಯಿ ಅನುದಾನ ನೀಡಲಾಗುವುದು, ದೇವರ ದಾಸಿಮಯ್ಯ ನವರ ಜಯಂತಿಯ ಜೊತೆಗೆ ದೇವಾಂಗ ಮೂಲ ಪುರುಷ ಶ್ರೀ ದೇವಲ ಮಹರ್ಷಿ ಜಯಂತಿ ಆಚರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ದತ್ತಾತ್ರೇಯ ಕಲ್ಯಾಣ ಮಂಟಪದಲ್ಲಿ ನಡೆದ ದೇವಾಂಗ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಹೇಳಿದರು, ಸಮುದಾಯದವರು ಒಗ್ಗೂಡುವುದರ ಜೊತೆಗೆ ಅಭಿವೃದ್ಧಿಯಾಗುವುದರ ಮೂಲಕ ನವಕರ್ನಾಟಕ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ತಿಳಿಸಿದರು. ಒರಿಸ್ಸಾ ದೇವಾಂಗ ಸಂಘದ ಮುಖಂಡ ಟಿ.ಗೋಪಿ ದೇಶವ್ಯಾಪಿ ಒಂದಾಗಿ ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದುವ ಅಗತ್ಯವಿದೆ ಎಂದರು, ಜಿಎಸ್ಟಿ ಜಾರಿಯಿಂದ ನೇಕರರು ತೊಂದರೆಗೆ ಒಳಗಾಗಿದ್ದು ಅದರ ಪರಿಹಾರಕ್ಕೆ ರಾಜಕೀಯ ಪಕ್ಷಗಳು ನೆರವಿಗೆ ಬರಬೇಕು ಎಂದು ಮನವಿ ಮಾಡಿದರು. ಶಾಸಕ ಟಿ. ವೆಂಕಟರಮಣಯ್ಯ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಶಾಸಕ ಸಿ.ಪಿ.ಯೋಗೇಶ್ವರ್, ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್, ಸಮ್ಮೇಳನಾಧ್ಯಕ್ಷ ಹೆಚ್.ಪಿ.ಶಂಕರ್ ಮತ್ತಿತರರು ಹಾಜರಿದ್ದರು. ಪರಮಪೂಜ್ಯ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
Comments