ಬಿಎಸ್​ವೈ ತವರು  ಕ್ಷೇತ್ರದಲ್ಲೇ ಬಿಜೆಪಿಗೆ ಬಾರಿ ಮುಖಭಂಗ..!!

05 Mar 2018 1:12 PM |
18320 Report

ಕಳೆದ ಬಾರಿ ಜೆಡಿಎಸ್​ ಜೊತೆಗೂಡಿ ಅಧಿಕಾರ ಹಿಡಿದಿದ್ದ ಕಮಲ ಪಾಳಯಕ್ಕೆ ಬಿಎಸ್​ವೈ ತವರು ಕ್ಷೇತ್ರದಲ್ಲೇ ಈ ಬಾರಿ ಮುಖಭಂಗವಾಗಿದೆ. ಬಿಜೆಪಿಯ ಮೇಯರ್​ ಅಭ್ಯರ್ಥಿ ಸುನಿತಾ ಅಣ್ಣಪ್ಪಗೆ 12 ಮತ, ಉಪಮೇಯರ್​ ಸ್ಥಾನದಲ್ಲಿ ಬಿಜೆಪಿ ರೇಣುಕಾ ನಾಗರಾಜ್ 12 ಮತಗಳನ್ನು ಪಡೆದು ಸೋತಿದ್ದಾರೆ. ಈ ಮೂಲಕ ಮಧು ಬಂಗಾರಪ್ಪ ಪ್ರಾಬಲ್ಯ ಸಾಧಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸ್ಥಾನ ಜೆಡಿಎಸ್​ಗೆ ಒಲಿದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಉಪ ಮೇಯರ್ ಪಟ್ಟ ಧಕ್ಕಿದೆ. ಆದರೆ ಕಾಂಗ್ರೆಸ್​ ಮೇಯರ್​ ಅಭ್ಯರ್ಥಿ ಕಣ್ಣೀರು ಸುರಿಸಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ವಯಂ ಪ್ರೇರಿತವಾಗಿ ಜೆಡಿಎಸ್ ಗೆ ಮತ ಹಾಕಿದ ಕೈ ಸದಸ್ಯರು. ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಮಾಜಿ ಸಿಎಂ ಬಿಎಸ್​ವೈಗೆ ಟಾಂಗ್​ ಕೊಟ್ಟಿದೆ. ಜೆಡಿಎಸ್​​ ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಂಡು ನಾಗರಾಜ್ ಕಂಕಾರಿ ಅವರನ್ನು ಮೇಯರ್ ಆಗಿ ಗೆಲ್ಲಿಸಿದೆ. ಕಾಂಗ್ರೆಸ್​ನ ವಿಜಯಲಕ್ಷ್ಮೀ ಪಾಟೀಲ್ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 35 ಸದಸ್ಯರ ಬಲಾಬಲದ ಪಾಲಿಕೆಯಲ್ಲಿ ಕೇವಲ 6 ಸದಸ್ಯರನ್ನು ಹೊಂದಿರುವ ಜೆಡಿಎಸ್ ಮೇಯರ್​ ಆಯ್ಕೆ ಮೂಲಕ ಹವಾ ಸೃಷ್ಠಿಸಿದೆ. ಜೆಡಿಎಸ್​ ಜೊತೆಗಿನ ಮೈತ್ರಿ ಗೊತ್ತಿದ್ದರೂ ಕಾಂಗ್ರೆಸ್​ನಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಜಶೇಖರ್​ಗೆ ತನ್ನನ್ನು ಬಿಟ್ಟು ಬೇರೆ ಯಾರೂ ಮತ ಹಾಕಿಲ್ಲ. ಇದರಿಂದ ಮನನೊಂದ ರಾಜಶೇಖರ್ ಕುಳಿತಲ್ಲೇ ಕಣ್ಣೀರು ಹಾಕಿದರು. 

Edited By

Shruthi G

Reported By

hdk fans

Comments