ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಸಮಾಜದಲ್ಲಿ ವಿವಿಧ ಮಹಿಳೆಯರಿಗಾಗಿ ಸ್ಪರ್ಧೆಗಳು
ದೊಡ್ಡಬಳ್ಳಾಪುರ ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಮಹಿಳಾ ಸಮಾಜ ಕಸ್ತೂರಿಬಾ ಶಿಶುವಿಹಾರ ಕೇಂದ್ರದಲ್ಲಿ ವಿಶ್ವ ಮಹಿಳಾದಿನಾಚರಣೆ ಅಂಗವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ದಿನಾಂಕ 10-3-2018ನೇ ಶನಿವಾರದಂದು ಬೆಳಿಗ್ಗೆ 11ಘಂಟೆಗೆ ಮಹಿಳಾ ಸಮಾಜದ ಆವರಣದಲ್ಲಿ ಆಯೋಜಿಸಲಾಗಿದೆ. ಭಾವಗೀತೆ, ಜನಪದ ಗೀತೆ, ಚಲನಚಿತ್ರ ಗೀತೆ, ರಸಪ್ರಶ್ನೆ, ಆಶು ಭಾಷಣ,ಏಕ ಪಾತ್ರಾಭಿನಯ, ಗಾದೆಗಳು, ಪ್ರಭಂದ ಸ್ಪರ್ಧೆ, ಚಿತ್ರ ಕಲೆ, ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಹಿಳೆಯರು ದಿನಾಂಕ 10-3-2018 ರಂದು ಬೆಳಿಗ್ಗೆ 10 ರಿಂದ 11 ಘಂಟೆಯವರೆಗೆ ನೊಂದಾಯಿಸಿಕೊಳ್ಳಬಹುದು. ಚರ್ಚಾ ಸ್ಪರ್ಧೆಯ ವಿಷಯ " ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಅವರ ಉಡುಪುಗಳೇ ಕಾರಣ" ಮತ್ತು ಪ್ರಭಂದ ಸ್ಪರ್ಧೆಯ ವಿಷಯ " ಸಾಂಸ್ಕೃತಿಕ ರಾಜಕಾರಣದಲ್ಲಿ ಲಿಂಗ ರಾಜಕಾರಣ" ಸೂಚನೆ: ಯಾವುದೇ ಸ್ಪರ್ಧೆಗೆ ಕನಿಷ್ಠ 10ಮಂದಿ ಸ್ಪರ್ಧಿಗಳಿದ್ದಲ್ಲಿ ಮಾತ್ರ ಸ್ಪಧೆ ನಡೆಯುತ್ತದೆ. ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಮಹಿಳಾ ದಿನಾಚರಣೆಯಂದು ಬಹುಮಾನಗಳನ್ನು ವಿತರಿಸಲಾಗುತ್ತದೆ.
Comments