ಇಂಧನ ಇಲಾಖೆ ಸಿಬ್ಬಂದಿಗೆ ಬಂಪರ್ ಗಿಫ್ಟ್..!
ಇಂಧನ ಇಲಾಖೆಯ ಸಿಬ್ಬಂದಿ ವರ್ಗಕ್ಕೆ ಶೇ.26ರಷ್ಟು ವೇತನ ಹೆಚ್ಚಳ ಮಾಡುವ ಒಪ್ಪಂದಕ್ಕೆ ಕೆಪಿಟಿಸಿಎಲ್ ಮತ್ತು ವಿದ್ಯುತ್ ವಿತರಣಾ ಕಂಪೆನಿಗಳ ನಡುವೆ ಇಂದು ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು, ಎಲ್ಲಾ ವಿದ್ಯುತ್ ಕಂಪೆನಿಗಳ ಸಿಬ್ಬಂದಿ ಮತ್ತು ನೌಕರರ ವೇತನವನ್ನು ಶೇ.38 ರಷ್ಟು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ ಎಸ್ಕಾಂಗಳ ಮೇಲಿನ ಹೊರೆ ಹೆಚ್ಚಾಗಬಾರದು ಎಂಬ ದೃಷ್ಟಿಯಿಂದ ಶೇ.26 ರಷ್ಟು ವೇತನ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಅಂತ ತಿಳಿಸಿದ್ದಾರೆ.
ಇದೇ ವೇಳೆ ಅವರು ಕನಿಷ್ಠ ವೇತನ 12,991 ರೂ. ನಿಂದ 16,370 ರೂ.ಗಳಿಗೆ ಏರಿಕೆಯಾಗುತ್ತದೆ ಎಂದರು.ಅದೇ ರೀತಿ ಗರಿಷ್ಠ ವೇತನ 96,700 ರೂ.ಗಳಿಂದ 1,22,000 ರೂ.ಗಳವರೆಗೆ ಹೆಚ್ಚಳವಾಗಲಿದೆ. ನೌಕರರ ಕುಟುಂಬದವರ ಪಿಂಚಣಿ ಕನಿಷ್ಠ 4 ಸಾವಿರ ರೂ.ನಿಂದ 8,185 ರೂ.ಗಳಿಗೆ, ಗರಿಷ್ಠ 39 ಸಾವಿರದಿಂದ 61 ಸಾವಿರ ರೂ.ಗಳವರೆಗೆ ಏರಿಕೆಯಾಗುತ್ತದೆ. 2017-18ನೇ ಸಾಲಿನಲ್ಲಿ ವೇತನ ಹೆಚ್ಚಳದಿಂದ ಎಸ್ಕಾಂಗೆ 604 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ. ಪಿಂಚಣಿ ಹೆಚ್ಚಳದಿಂದ 240 ಕೋಟಿ ರೂ. ಹೊರೆಯಾಗುತ್ತದೆ ಎಂದು ಹೇಳಿದರು.
Comments