ದೇವಾಂಗ ಮಹಾ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ
ದೊಡ್ಡಬಳ್ಳಾಪುರದಲ್ಲಿ ನಡೆಯುವ ದೇವಾಂಗ ಮಹಾ ಸಮ್ಮೇಳನ 2018ರ ಸಮ್ಮೇಳನಾಧ್ಯಕ್ಷರಾದ ಹಿರಿಯ ವಾಣಿಜ್ಯೋಧ್ಯಮಿ, ದೇವಾಂಗ ಕುಲರತ್ನ,ಶ್ರೀ ಹೆಚ್.ಪಿ.ಶಂಕರ್ ರವರನ್ನು ದೇವಾಂಗ ಸಮ್ಮೇಳನದ ಸ್ವಾಗತ ಸಮಿತಿಯ ಸದಸ್ಯರು ಇಂದು ಆಹ್ವಾನ ಪತ್ರಿಕೆಯನ್ನು ನೀಡಿ ದಿನಾಂಕ 4ನೇ ಭಾನುವಾರ ಮತ್ತು 5 ಸೋಮವಾರ ನಡೆಯುವ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಆಹ್ವಾನಿಸಿದರು. ಗೌರವಾಧ್ಯಕ್ಷರುಗಳಾದ ಶ್ರೀ ತಿಮ್ಮಶೆಟ್ಟಪ್ಪ, ಅಧ್ಯಕ್ಷರು, ದೇವಾಂಗ ಮಂಡಲಿ, ಶ್ರೀ ಪಂಜಿನಿ ಪಿ.ಸಿ.ಲಕ್ಷ್ಮೀನಾರಾಯಣ್, ಅಧ್ಯಕ್ಷರು, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್, ಕಾರ್ಯಾಧ್ಯಕ್ಷ ಶ್ರೀ ಎಂ.ಕೃಷ್ಣಮೂರ್ತಿ, ಅಧ್ಯಕ್ಷರು, ತೆಲುಗು ದೇವಾಂಗ ಸಂಘ, ಪ್ರಧಾನ ಕಾರ್ಯದರ್ಶಿ ಶ್ರೀ ಡಿ,ಶಿವಶಂಕರಪ್ಪ, ಕಾರ್ಯದರ್ಶಿ, ತೆಲುಗು ದೇವಾಂಗ ಸಂಘ, ಸಂಚಾಲಕರಾದ ಶ್ರೀ ಹೆಚ್.ವಿ ಅಖಿಲೇಶ್, ನಿರ್ದೇಶಕರು, ದೇವಾಂಗ ಮಂಡಲಿ, ಪ್ರಧಾನ ಕಾರ್ಯದರ್ಶಿ, ನಗರ ಜೆಡಿಎಸ್ ಘಟಕ, ಮತ್ತು ಸ್ವಾಗತ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
Comments