ನಾಲಿಗೆ ಹರಿಬಿಟ್ಟ ಜೆಡಿಎಸ್ ಬಂಡಾಯ ಶಾಸಕನಿಗೆ ಕ್ಲಾಸ್ ತೆಗೆದುಕೊಂಡ ಕುಮಾರಣ್ಣ

ರಾಮನಗರದಲ್ಲಿ ಸುದ್ದಿಗೋಷ್ಠಿ ಯೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು,ತಾ.ಪಂ ಸದಸ್ಯನಿಗೆ ಶಾಸಕ ಬಾಲಕೃಷ್ಣರಿಂದ ಅವಾಚ್ಯ ಶಬ್ದಗಳಿಂದ ನಿಂದನೆ ವಿಚಾರವಾಗಿ ಹೇಳಿಕೆ ನೀಡಿದ್ದಾರೆ.ಅವರಿಂದ ಒಳ್ಳೆಯ ಮಾತುಗಳನ್ನ ನಿರೀಕ್ಷೆ ಮಾಡೋಕೆ ಸಾದ್ಯಾನಾ..? ಇದು ನಮ್ಮ ಕಾರ್ಯಕರ್ತರಿಗಷ್ಟೇ ಆದ ಅವಮಾನವಲ್ಲ ನಮ್ಮ ರಾಮನಗರ ತಾಲೂಕಿನ ಹೆಸರನ್ನ ಹೇಳಿದ್ದಾರೆ, ಕೂಟಗಲ್ ಪಂಚಾಯ್ತಿ ಸದಸ್ಯ ಅಂತಾ ಹೇಳಿದ್ದಾರೆ. ಒಬ್ಬ ಜನಪ್ರತಿನಿಧಿ ಮಾತನಾಡಬೇಕಾದ್ರೆ ಹತ್ತು ಬಾರಿ ತೂಕ ಮಾಡಿ ಮಾತನಾಡಬೇಕು.ನಾಲಿಗೆ ಇದೆ ಅಂತಾ ಬಳಸುವ ಪದಬಳಕೆ ಆಗುವ ಅನಾಹುತದ ಬಗ್ಗೆ ಅರಿತುಕೊಳ್ಳಬೇಕು ಎಂದು ಟಾಂಗ್ ನೀಡಿದ್ದಾರೆ.
ಅವರು ನನಗೆ ಹಳೆಯ ಸ್ನೇಹಿತರೇ, ಅವರ ನಡುವಳಿಕೆ ಏನು ಅಂತಾ ಗೊತ್ತು ಅವರದ್ದು ಲಂಗು ಲಗಾಮಿಲ್ಲದ ನಾಲಿಗೆ ಅವರಿಗೆ ಇದ್ದಷ್ಟೇ ಅಧಿಕಾರ ತಾ.ಪಂ ಸದಸ್ಯನಿಗೂ ಇದೆ ಅದನ್ನ ಅರಿತುಕೊಂಡ್ರೆ ಸೂಕ್ತ ಅನ್ನೋದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.ಮಾಗಡಿ ಕ್ಷೇತ್ರಕ್ಕೆ ಎಚ್‌ಡಿಕೆ ಕೊಡುಗೆ ಶೂನ್ಯ ಎಂಬ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಅವರ ಹೇಳಿಕೆಗಳನ್ನ ಯಾಕೆ ಅಷ್ಟು ಸೀರಿಯಸ್ ಆಗಿ ಪರಿಗಣಿಸ್ತೀರಿ.ನಾನು ಸಿಎಂ ಆಗಿದ್ದಾಗ ಮಾಗಡಿಗೆ ಕೊಟ್ಟ ಕೊಡುಗೆ ಎಷ್ಟು..? ಈಗಿನ ಸಿಎಂ ಸಿದ್ದರಾಮಯ್ಯ ಎಷ್ಟು ಕೊಟ್ಟಿದ್ದಾರೆ ಅಂತಾ ನೋಡಲಿ ಎಂದು ಗುಡುಗಿದ್ದಾರೆ.ಇವರತ್ರ ನಾನು ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾ..? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
Comments