ರೈತರ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಿದ ಡಿಕೆಶಿ
ಪಾವಗಡ ತಾಲೂಕು ತಿರುಮಣಿಯಲ್ಲಿ ಸೋಲಾರ್ ಪಾರ್ಕ್ ನ ಮೊದಲ ಹಂತದ ಉತ್ಪಾದನೆಯಾದ ಆರು ನೂರು ಮೆಗಾವಾಟ್ ಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ.
ಇದಕ್ಕೆ ಕರಣ ಪಾವಗಡದ ರೈತರು ಈ ದೇಶಕ್ಕಾಗಿ ಮಾಡಿರುವ ತ್ಯಾಗ. ಇಂಥ ದೊಡ್ಡ ಯೋಜನೆ ಸಾಕಾರ ಆಗುವುದಕ್ಕೆ ಸಹಕರಿಸಿದ ಇಲ್ಲಿನ ರೈತರಿಗೆ ಕೃತಜ್ಞತೆ ಹೇಳ್ತೀನಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಇದು 14 ಸಾವಿರ ಕೋಟಿ ರುಪಾಯಿಯ ಯೋಜನೆ. ಇದಕ್ಕಾಗಿ ಕೇಂದ್ರ ಸರಕಾರದಿಂದಲೂ ಹಣ ಬಂದಿದೆ. ಆದ್ದರಿಂದ ನಾವು ಅದನ್ನು ಸ್ಮರಿಸಬೇಕು. ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಸ್ವಾವಲಂಬನೆ ಸಾಧಿಸಲಿದೆ.
ಕೈಗಾರಿಕೆಗಳಿಗೆ, ಜನರಿಗೆ ವಿದ್ಯುತ್ ಪೂರೈಕೆಗೆ ಏನೂ ಸಮಸ್ಯೆ ಆಗುವುದಿಲ್ಲ ಎಂದರು. ನಮ್ಮ ಸಾಧನೆ ಬಗ್ಗೆ ಕೇಂದ್ರ ಸರಕಾರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಹೇಳಿದರು. ಅಂಕಿ- ಅಂಶಗಳ ಸಮೇತ ಇಂಧನ ಇಲಾಖೆಯ ಸಾಧನೆಯನ್ನು ಸಭೆಯ ಮುಂದಿಟ್ಟ ಅವರು, ಇಂಥ ಬ್ಠಹತ್ ಯೋಜನೆಗಳ ಸಾಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರ ಬಹಳ ಮುಖ್ಯ. ಪಾವಗಡ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಆಗಬೇಕು. ಇದಕ್ಕಾಗಿ ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.
Comments