ಶ್ರೀ ರಾಮ ಪ್ರಭುವಿನ ಅದ್ದೂರಿ ಶೋಭಾಯಾತ್ರೆ ಮಾರ್ಚ್ 11ರ ಭಾನುವಾರ ಬೆಳಿಗ್ಗೆ 11 ಘಂಟೆಗೆ





ವಿಶ್ವ ಹಿಂದೂ ಪರಿಷತ್, ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡ ಇವರಿಂದ ದಿನಾಂಕ 11ನೇ ಮಾರ್ಚ್ 2018ಭಾನುವಾರದಂದು ಬೆಳಿಗ್ಗೆ 11 ಘಂಟೆಗೆ ಸರಿಯಾಗಿ ನಗರದ ತಾಲ್ಲೂಕು ಆಫೀಸ್ ಸರ್ಕಲ್ ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಶ್ರೀರಾಮ, ಹನುಮ ಹಾಗೂ ಶಿವಾಜಿ ಪ್ರತಿಮೆಗಳೊಂದಿಗೆ ಅದ್ದೂರಿ ಶೋಭಾಯಾತ್ರೆ ಏರ್ಪಡಿಸಲಾಗಿದೆ. ವೇದಿಕೆ ಕಾರ್ಯಕ್ರಮ ಪಿ.ಎಲ್.ಡಿ.ಬ್ಯಾಂಕ್ ಎದುರು ಇರುವ ಮೈದಾನದಲ್ಲಿ ಸಂಜೆ 5 ಘಂಟೆಗೆ ಇರುತ್ತದೆ, ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡುವವರು ಶ್ರೀ ಸೂರ್ಯನಾರಾಯಣ್, ಕ್ಷೇತ್ರಿಯ ಸಂಯೋಜಕ್, ಶ್ರೀ ಸುನಿಲ್ ಕೆ.ಆರ್. ಪ್ರಾಂತ ಸಂಯೋಜಕ್, ಬಜರಂಗದಳ, ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ರಂಗಸ್ವಾಮಿ, ಜಿಲ್ಲಾ ಉಪಾಧ್ಯಕ್ಷರು, ವಿಶ್ವ ಹಿಂದೂ ಪರಿಷತ್, ದಿವ್ಯ ಸಾನಿಧ್ಯ ವಹಿಸುವವರು ಶ್ರೀ ಶ್ರೀ ಶ್ರೀ ದಿವ್ಯ ಜ್ಞಾನಾನಂದ ಸ್ವಾಮೀಜಿಯವರು, ಪುಷ್ಪಾಂಡಜ ಮಹರ್ಷಿ ಆಶ್ರಮ, ತಪಸೀಹಳ್ಳಿ, ದೊಡ್ಡಬಳ್ಳಾಪುರ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶೋಭಾ ಯಾತ್ರೆಗೆ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಕೋರಲಾಗಿದೆ.
Comments