ಅನ್ನದಾತರಿಗೆ ಅವಮಾನ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳು : ಎಚ್ ಡಿಡಿ ಕಿಡಿ

ಕಾಂಗ್ರೆಸ್ ಹಾಗು ಬಿಜೆಪಿ ಸರ್ಕಾರಗಳು ರೈತನ ಕಷ್ಟಗಳನ್ನು ಪರಿಹರಿಸುವುದನ್ನು ಬಿಟ್ಟು ಅನ್ನದಾತನನ್ನು ಅವಮಾನಿಸುತ್ತ ಬರುತ್ತಿದೆ. ಇಡೀ ದೇಶಕ್ಕೆ ಅನ್ನ ಒದಗಿಸುವ ರೈತನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಕ್ಕಿ ಒದಗಿಸುವ ಆಮಿಷ ಒಡ್ಡುವ ಮೂಲಕ ಅವಮಾನಿಸುತ್ತಿವೆ.
ಈ ಯೋಜನೆಗಳನ್ನು ರೈತರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಟೀಕಿಸಿದ್ದಾರೆ ಕುಮಾರ ಪರ್ವ ವಿಕಾಸ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು. ನವ ಕರ್ನಾಟಕ ನಿರ್ವಣಕ್ಕಾಗಿ ಇದೀಗ ಯಾತ್ರೆ, ಸಮಾವೇಶ ನಡೆಸುತ್ತಿರುವ ಕಾಂಗ್ರೆಸ್ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮಾಡಿದ್ದಾದರೂ ಏನು? ರಾಜ್ಯದಲ್ಲಿ ಸಾಧನಾ ಸಮಾವೇಶ ನಡೆಸುವುದರ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸುತ್ತಿದ್ದಾರೆ. ಆಯಾ ಕಾಮಗಾರಿಗೆ ಸಮರ್ಪಕ ಅನುದಾನ ಇದೆಯೋ, ಇಲ್ಲವೋ ಎಂಬುದು ಗೊತ್ತಿಲ್ಲ. ಯಾವಾಗ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಕಿಡಿಕಾರಿದರು.
Comments