ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಮೃದ್ಧಿ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ



ದೊಡ್ಡಬಳ್ಳಾಪುರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಬುಧವಾರ ಸಮೃದ್ಧಿ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾಗಿ ಕೆ.ಜಿ. ಅಶೋಕ್, ಉಪಾಧ್ಯಕ್ಷರುಗಳಾಗಿ ರಾಮ್ ನಾರಾಯಣ್, ಷಫಿಉಲ್ಲ, ಮಂಜುಳಮ್ಮ, ದೇವಾನಂದ್, ಸುರೇಶ್, ಅಶ್ವತ್ಥಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ನಟರಾಜ್, ಅಂಜನಾಮೂರ್ತಿ, ನಾಗಲಕ್ಷ್ಮಿ, ಕಾರ್ಯದರ್ಶಿಗಳಾಗಿ ಇರ್ಫಾನ್, ಅಹಮದ್ ಷರೀಫ್, ನಾರಾಯಣಸ್ವಾಮಿ, ನಿರ್ಮಲ, ಸಂಘಟನಾ ಕಾರ್ಯದರ್ಶಿಗಳಾಗಿ ಎಂ. ರಾಮು. ಎಲ್.ಎನ್.ಶೀಲ ಆಯ್ಕೆಯಾಗಿ ಅಧಿಕಾರ ಪಡೆದುಕೊಂಡರು. ಸಮಾರಂಭದಲ್ಲಿ ಶಾಸಕ ವೆಂಕಟರಮಣಯ್ಯ, ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್, ತಾ.ಪಂ.ಅಧ್ಯಕ್ಷ ಶ್ರೀವತ್ಸ, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿ ಹಾಜರಿದ್ದರು.
Comments