ದೊಡ್ಡಬಳ್ಳಾಪುರ ನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಯೋಗ ನಟರಾಜ್ ಆಯ್ಕೆ

01 Mar 2018 7:34 AM |
517 Report

ಬೆಂಗಳೂರು ಗ್ರಾಮಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವ್ಯಾಪ್ತಿಯಲ್ಲಿ ಬರುವ ದೊಡ್ಡಬಳ್ಳಾಪುರ ನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಎ. ನಟರಾಜ್ ಅವರನ್ನು ನೇಮಕ ಮಾಡಲಾಗಿದೆ. ದೇವಾಂಗ ಸಮುದಾಯದ ಯುವ ಮುಖಂಡರಾಗಿರುವ ಹದಿನೈದನೇ ವಾರ್ಡ್ ನಲ್ಲಿ ಸಕ್ರಿಯವಾಗಿ ಜನರ ಸೇವೆ ಸಲ್ಲಿಸುತ್ತಿರುವ, ನಗರ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ನಟರಾಜ್ ದೇವಾಂಗ ಮಂಡಲಿಯ ನಿರ್ದೇಶಕರಾಗಿ ಹಾಲಿ ಸಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ನಿಸರ್ಗ ಯೋಗ ಕೇಂದ್ರ ಸ್ಥಾಪಿಸಿ ನಗರದ ಸಾವಿರಾರು ಮಕ್ಕಳಿಗೆ ಯೋಗ ಕಲಿಸಿದ್ದಾರೆ. ಶ್ರೀ ನಟರಾಜ್ ರವರು ಇನ್ನೂ ಹೆಚ್ಚಿನ ಎತ್ತರಕ್ಕೆ ಏರಲಿ ಎಂದು ದೇವಾಂಗ ಮಂಡಲಿ ಅಧ್ಯಕ್ಷರಾದ ಶ್ರೀ ತಿಮ್ಮಶೆಟ್ಟಪ್ಪ ಶುಭ ಹಾರೈಸಿದ್ದಾರೆ. ಶಾಸಕ ಶ್ರೀ ಟಿ. ವೆಂಕಟರಮಣಯ್ಯ, ದೇವಾಂಗ ಮಂಡಲಿ ಮಾಜಿ ಅಧ್ಯಕ್ಷ ಶ್ರೀ ಎಂ.ಜಿ.ಶ್ರೀನಿವಾಸ, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿ ನಟರಾಜ್ ಅಭಿನಂದಿಸಿದ್ದಾರೆ.

Edited By

Ramesh

Reported By

Ramesh

Comments