ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಕಮಲ ಜಾತ್ರೆ
ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ದಿನಾಂಕ:-02-03-2018 ರಿಂದ ದಿನಾಂಕ:-04-03-2018 ರ ವರೆಗೆ ಮೂರು ದಿನಗಳ ಕಾಲ[ಶುಕ್ರವಾರ, ಶನಿವಾರ ಮತ್ತು ಭಾನುವಾರ] ಭಾರತೀಯ ಜನತಾ ಪಕ್ಷ ದೊಡ್ಡಬಳ್ಳಾಪುರ ವತಿಯಿಂದ ಕಮಲಜಾತ್ರೆಯನ್ನು ಆಯೊಜಿಸಲಾಗಿದೆ, ಈ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಈ ಕಮಲ ಜಾತ್ರೆಯಲ್ಲಿ ಸಾರ್ವಜನಿಕರು, ಕಾರ್ಯಕರ್ತರು ಭಾಗವಹಿಸಬಹುದು. ಈ ಜಾತ್ರೆಯಲ್ಲಿ ನಗೆಹಬ್ಬ, ಜಾದು ಶೋ, ಲೇಸರ್ ಶೋ, ಬೊಂಬೆಯಾಟ, ಮಲ್ಲ ಕಂಭದ ಜೊತೆಯಲ್ಲಿ ವಿವಿಧ ಮನರಂಜನಾ ಆಟಗಳಾದ ಜೈಯಿಂಟ್ ವೀಲ್, ಫ಼್ಲೈಯಿಂಗ್ ಬೋಟ್ ಮತ್ತು ಇತರ ಆಟಗಳು ಇರುತ್ತದೆ, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ.
Comments