ಕೆ.ಎಸ್.ಈಶ್ವರಪ್ಪ ನವರ ಪರಮಾಪ್ತ , ಬೆಂಬಲಿಗರು ತೆನೆ ಹೊರಲು ಸಜ್ಜು..!!

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಜೆಡಿಎಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ತನ್ನದೇ ಆದ ರೀತಿಯಲ್ಲಿ ಸಿದ್ದಗೊಲುತ್ತಿದೆ. ಎಲ್ಲ ಕ್ಷೇತ್ರದ ಅಭ್ಯರ್ಥಿಗಳು ಸಹ ಬಹಳ ಚುರುಕಿನಿಂದ ಕೆಲಸ ಮಾಡುತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕೆ.ಎಸ್.ಈಶ್ವರಪ್ಪ ಜೆಡಿಎಸ್ ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ಅಲದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜ್ಯ ಕಾರ್ಯದರ್ಶಿ, ಬಿಜೆಪಿಯ ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಪರಮಾಪ್ತ ಕಾಶೀನಾಥ ಹುಡೇದ ಹಾಗೂ ಅವರ ಬೆಂಬಲಿಗರು ಜೆಡಿಎಸ್ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ತೊರೆದು ಜೆಡಿಎಸ್ ಸೇರಲು ಅಖಾಡ ಸಿದ್ದಗೊಳಿಸಿದ್ದಾರೆ. ಮೊದಲೇ ಮುಧೋಳ ಮೀಸಲು ಕ್ಷೇತ್ರ. ಅದರ ಮತ್ತೊಂದು ಭಾಗ ಲೋಕಾಪುರ ಇದು ಬಿಜೆಪಿಯ ಪ್ರಾಬಲ್ಯದ ಭಾಗ.ಅಲ್ಲದೆ ಮುಖಂಡ ಕಾಶೀನಾಥ ಹುಡೇದ ಕೂಡ ತಮ್ಮನ್ನು ತಮ್ಮ ಬೆಂಬಲಿಗರನ್ನು ನಿರ್ಲಕ್ಷಿಸಲಾಗುತ್ತಿದೆ. ಯಾವುದೇ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ. ಆದರಿಂದ ಬಿಜೆಪಿ ತೊರೆದು ಜೆಡಿಎಸ್ ಪಕ್ಷವನ್ನು ಸೇರಲಿಚ್ಛಿಸಿದ್ದೇವೆಂದು ಹೇಳಿಕೊಂಡಿದ್ದಾರೆ. ಇದರಿಂದ ಲೋಕಾಪುರ ಭಾಗಗಳಲ್ಲಿ ಜೆಡಿಎಸ್ ಬಲಗೊಳಲಿದೆ. ಮುಧೋಳ ಮತಕ್ಷೇತ್ರದಲ್ಲಿ ಆರಂಭಗೊಂಡಿರುವ ಪಕ್ಷಾಂತರ ಪರ್ವ ಜೆಡಿಎಸ್ ಪಕ್ಷದ ಪಾಲಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ, ಇದು ಬಿಜೆಪಿಗೆ ಮುಳುವಾಗಲಿದೆ ಎಂದು ಮೂಲಗಳು ತಿಳಿಸಿವೆ.
Comments