ಉಪ್ಪಿ ಮದುವೆ ಬಗ್ಗೆ ಬೇಸರ ವ್ಯೆಕ್ತಪಡಿಸಿದ ಗುರುಕಿರಣ್

ಗುರುಕಿರಣ್ ಹಾಗು ಉಪೇಂದ್ರರವರು ಉತ್ತಮ ಗೆಳೆಯರು ಇವರಿಬ್ಬರನ್ನು ಸಿನಿಮಾ ಮಾತ್ರವಲ್ಲದೆ ಉಪೇಂದ್ರ ಮತ್ತು ಗುರುಕಿರಣ್ ಇಬ್ಬರು ವೈಯಕ್ತಿಕವಾಗಿಯೂ ತುಂಬ ಚೆನ್ನಾಗಿ ಇದ್ದಾರೆ. ಇಂತಹ ಸ್ನೇಹ ಇದ್ದರೂ ಕೂಡ ಉಪೇಂದ್ರ ತಮ್ಮ ಮದುವೆ ಬಗ್ಗೆ ಗುರುಕಿರಣ್ ಅವರಿಗೆ ಏನು ಹೇಳಿರಲಿಲ್ಲವಂತೆ. ಈ ವಿಷಯಕ್ಕೆ ಗುರುಕಿರಣ್ ಬೇಸರ ವ್ಯೆಕ್ತಪಡಿಸಿದರು.
ಸ್ಟಾರ್ ಸುವರ್ಣ ಮತ್ತು ವಿಯು ಅಪ್ ನಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಮೊದಲ ಅತಿಥಿಯಾಗಿ ಉಪೇಂದ್ರ ಮತ್ತು ಗುರುಕಿರಣ್ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶಿವಣ್ಣ ಗುರುಕಿರಣ್ ಅವರಿಗೆ ಒಂದು ಪ್ರಶ್ನೆ ಕೇಳಿದರು. 'ನಿಮಗೆ ಉಪೇಂದ್ರ ಅವರಲ್ಲಿ ಇರುವ ಯಾವ ಗುಣ ಇಷ್ಟ ಆಗುವುದಿಲ್ಲ?' ಎಂದು ಶಿವಣ್ಣ ಕೇಳಿದರು. ಆಗ ಗುರುಕಿರಣ್ ''ಉಪೇಂದ್ರ ಅವರು ಸ್ವಲ್ಪ ಸೀಕ್ರೆಟಿವ್ ಅವರು ಹೆಚ್ಚು ಏನು ಹೇಳುವುದಿಲ್ಲ ''ಉಪ್ಪಿ ಅವರ ಮದುವೆ ಸಮಯದಲ್ಲಿಯೂ ನನಗೆ ಏನು ಹೇಳಿರಲಿಲ್ಲ. ಮದುವೆ ಆಗುವ ಹಿಂದಿನ ದಿನ ಜೊತೆಗೆ ಇದ್ವಿ ಆದರೂ ಮದುವೆ ಇರುವ ವಿಷಯ ಹೇಳಿರಲಿಲ್ಲ. ಅದು ಮನಸಿನಲ್ಲಿ ಯಾವಾಗಲೂ ಕೊರೆಯುತ್ತದೆ'' ಎಂದು ಗುರು ಹೇಳಿದ್ದಾರೆ. ಗುರು ಉತ್ತರಕ್ಕೆ ಪ್ರತಿಕ್ರಿಯೆ ನೀಡಿದ ಶಿವಣ್ಣ ''ನನಗೆ ಉಪ್ಪಿ ಎಷ್ಟು ಹತ್ತಿರ. ಆದರೂ ಉಪ್ಪಿ ನನಗೆ ಕೂಡ ಮದುವೆ ವಿಷಯ ಹೇಳಿರಲ್ಲ ಎಂದು ನಕ್ಕರು.
Comments