ಮಹಿಳಾದಿನಾಚರಣೆ ಪ್ರಯುಕ್ತ ನಗರಸಭೆಯಲ್ಲಿ ಮಹಿಳಾ ಸದಸ್ಯರು ಮತ್ತು ಮಹಿಳಾ ಸಿಬ್ಬಂದಿ ವರ್ಗಕ್ಕೆ ಕ್ರೀಡಾಕೂಟ
ಮಹಿಳಾ ದಿನಾಚರಣೆಯ ಪ್ರಯುಕ್ತ ನಗರಸಭಾ ಸದಸ್ಯರು, ಹಾಗೂ ನಗರಸಭಾ ಮಹಿಳಾ ಸಿಬ್ಬಂದಿ ವರ್ಗದವರು ನಗರಸಭಾ ಕಛೇರಿಯ ಆವರಣದಲ್ಲಿ ಕ್ರೀಡಾ ಕೂಟದ ಕಾರ್ಯಕ್ರಮವನ್ನು ಅಧ್ಯಕ್ಷರಾದ ಶ್ರೀ ತ.ನ.ಪ್ರಭುದೇವ್ ರವರು ಹಾಗೂ ಪೌರಾಯುಕ್ತರಾದ ಆರ್. ಮಂಜುನಾಥ ರವರು ಉದ್ಘಾಟನೆ ಮಾಡಿದರು, ಈ ಸಂಧರ್ಭದಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಎಚ್.ಎಸ್.ಶಿವಶಂಕರ್, ಉಪಾಧ್ಯಕ್ಷೆ ಜಯಲಕ್ಷ್ಮಿ ನಟರಾಜ್, ನಗರಸಭಾ ಸದಸ್ಯರಾದ ಸುಶೀಲಾ ರಾಘವ, ಶ್ರೀಮತಿ ಯಶೋಧಮ್ಮ, ಶ್ರೀಮತಿ ಮಂಜುಳ, ನಾಮಿನಿ ಸದಸ್ಯರಾದ ಶ್ರೀಮತಿ ರೇವತಿ, ಶ್ರೀಮತಿ ಶೀಲ ಉಪಸ್ಥಿತರಿದ್ದರು. ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
Comments