ಸಮಾರೋಪ ಸಮಾರಂಭ ಮಾರ್ಚ್ 5 ರಂದು ಶ್ರೀಗಳ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ
ದಿನಾಂಕ 5-3-2018 ಸೋಮವಾರ ಬೆಳಿಗ್ಗೆ 9-30 ದತ್ತಾತ್ರೇಯ ಕಲ್ಯಾಣ ಮಂದಿರ ಆವರಣದಿಂದ ಶ್ರೀಗಳ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಹೊರಡಲಿದೆ. ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಲ್ಯಾಣ ಮಂದಿರದ ಆವರಣದಲ್ಲಿ ಅಂತ್ಯ ಗೊಳ್ಳುತ್ತದೆ. ಮದ್ಯಾನ್ಹ 2 ಘಂಟೆಗೆ ಮಹಾ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದೆ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ದಯಾನಂದಪುರಿ ಸ್ವಾಮೀಜಿಯವರು ವಹಿಸಲಿದ್ದಾರೆ, ಉದ್ಘಾಟನೆ ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರಿಂದ, ದೇವಾಂಗ ಕುಲರತ್ನ ಹೆಚ್.ಪಿ.ಶಂಕರ್ ಸಮ್ಮೇಳನಾಧ್ಯಕ್ಷರಾಗಿರುವ ಸಮಾರಂಭದಲ್ಲಿ ಡಾ. ಎಂ ವೀರಪ್ಪಮೊಯಿಲಿ, ಎಂ.ಪಿ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಶ್ರೀ ಕೃಷ್ಣಬೈರೇಗೌಡ, ಕೃಷಿಸಚಿವರು, ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ, ಸ್ವಾಗತ ಮತ್ತು ಪ್ರಸ್ಥಾವನೆಯನ್ನು ಶ್ರೀ ಕೆ. ಗೋವಿಂದಪ್ಪ, ಅಧ್ಯಕ್ಷರು, ದೇವಾಂಗ ಸಮ್ಮೇಳನ ಸ್ವಾಗತ ಸಮಿತಿ, ಇವರು ಮಾಡಲಿದ್ದಾರೆ.
Comments