ಹಿಂದೂ ಋಷಿಯಾದ ದೇವಲಮಹರ್ಷಿ ವಂಶಸ್ಥರೆಂದು ಹೇಳಲಾಗುವ ದೇವಾಂಗ ಸಮುದಾಯ
ದೇವಾಂಗ ಸಮುದಾಯವು ಹೆಚ್ಚಾಗಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ಪಾಂಡಿಚೆರಿ ಮತ್ತು ತಮಿಳುನಾಡಿನಲ್ಲಿ ಕಂಡುಬರುತ್ತದೆ, ದೇವಾಂಗ ಮತ್ತು ಪದ್ಮಶಾಲಿಗಳು ಹಿಂದೆ ಒಂದೇ ಸಮುದಾಯದವರಾಗಿದ್ದವರು, ದೇವಾಂಗದವರು ಶೈವ ಪದ್ಧತಿಯನ್ನು ಅನುಸರಿಸಲು ಪ್ರಾರಂಭಿಸಿದಾಗ ಮತ್ತು ಪದ್ಮಾಶಾಲಿಗಳು ವೈಷ್ಣವರಾಗಿ ಮುಂದುವರೆಸಿದಾಗ ಇಬ್ಬರನ್ನೂ ಬೇರೆಯಾಗಿ ವಿಂಗಡಿಸಲಾಯಿತು. ದೇವಾಂಗದವರು ಶೈವ ಧರ್ಮವನ್ನು ಅನುಸರಿಸುತ್ತಾ ಜನಿವಾರವನ್ನು ಧರಿಸುತ್ತಾರೆ ಸುಮಾರು 1532 ರಲ್ಲಿ, ದೇವಾಂಗ ಜನರು ತಮ್ಮ ಕುಲಪುರಾಣ ಅಥವಾ ಪೌರಾಣಿಕ ಇತಿಹಾಸವನ್ನು ಬರೆಯಲು ತೆಲುಗು ಕವಿ ಭದ್ರಾಳಿಂಗ ಕವಿ ಅವರನ್ನು ವಿನಂತಿಸಿದರು. ಅವರು ದಾಶಿಮಾತ್ರ-ದ್ವಿಪದಿ ಶೈಲಿಯಲ್ಲಿ ದೇವಂಗ ಪುರಾಣವನ್ನು ರಚಿಸಿರುತ್ತಾರೆ.
ದೇವಾಂಗ ಸಮುದಾಯದ ಹೆಚ್ಚಿನ ಸದಸ್ಯರು ರೇಷ್ಮೆ ಮತ್ತು ಹತ್ತಿಯ ಎಲ್ಲಾ ವಿಧದ ಬಟ್ಟೆಗಳ ನೇಯ್ಗೆಯಲ್ಲಿ ಉತ್ತಮ ಕಲೆಗಾರಿಕೆಗೆ ಹೆಸರುವಾಸಿಯಾಗಿದ್ದಾರೆ, ನೇಯ್ಗೆಯನ್ನು ಸಾಮಾನ್ಯವಾಗಿ ಪುರುಷರು ಮಾಡುತ್ತಾರೆ, ಮಹಿಳೆಯರು ನೂಲಿಗೆ ಬಣ್ಣ ತುಂಬುವುದು ಮತ್ತು ದಾರ ತೆಗೆಯುವ ಕೆಲಸ ಮಾಡುತ್ತಾರೆ.
Comments