ಜೆಡಿಎಸ್ ಹಾಗೂ ಓವೈಸಿ ಮೈತ್ರಿ ಕಂಡು ದಂಗಾಗಿರುವ ಕಾಂಗ್ರೆಸ್

ಚುನಾವಣಾ ಪ್ರಚಾರದಲ್ಲಿ ಮುಂದಿರುವ ಜೆಡಿಎಸ್ ಗೆ ಮತ್ತಷ್ಟು ಬಲ ಹೆಚ್ಚಿಸಲು ಓವೈಸಿಯೊಂದಿಗೆ ಮತ್ರಿ ಮಾಡಕೋಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಭಾವಿ ಮುಸ್ಲಿಂ ನಾಯಕ ಅಕ್ಬರುದ್ದೀನ್ ಓವೈಸಿ ಈಗ ಕರ್ನಾಟಕದ ರಾಜಕಾರಣಕ್ಕೆ ಅಡಿ ಇಡಲು ಬಯಸಿರುವುದು ಮತ್ತು ಅದಕ್ಕೆ ಪೂರಕವಾಗಿ ಮಾಜಿ ಪ್ರಧಾನಿ ದೇವೇಗೌಡರ ಜತೆ ಮಾತನಾಡಿರುವುದು ನಿಜಕ್ಕೂ ಕುತೂಹಲಕಾರಿ ವಿಷಯ.
ಅಂದ ಹಾಗೆ ಶುರುವಿನಲ್ಲಿ ಜೆಡಿಎಸ್ ಅಸ್ತಿತ್ವ ಎಲ್ಲಿದೆ? ಅಂತ ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದರು. ಆದರೆ ಫೆಬ್ರವರಿ ಹದಿನೇಳರಂದು ಜೆಡಿಎಸ್ ನಡೆಸಿದ ಸಮಾವೇಶಕ್ಕೆ ಲಕ್ಷಾಂತರ ಜನ ಬಂದದ್ದನ್ನು ನೋಡಿದ ಮೇಲೆ, ಇಲ್ಲ, ಜೆಡಿಎಸ್ ತೃತೀಯ ಶಕ್ತಿಯಾಗಿ ಮೇಲೆದ್ದು ನಿಲ್ಲಲಿದೆ ಎಂಬ ಮಾತುಗಳು ಕೇಳಿ ಬರತೊಡಗಿದವು. ಈ ಜೆಡಿಎಸ್ ನ್ನು ಬಲಿಷ್ಠ ಶಕ್ತಿಗಳನ್ನು ಕಂಡು ಕಾಂಗ್ರೆಸ್ ದಂಗಾಗಿ ಹೋಗಿದೆ. ಈಗ ಅಕ್ಬರುದ್ದೀನ್ ಓವೈಸಿ ಜತೆಗಿನ ಜೆಡಿಎಸ್ ಮೈತ್ರಿಯ ಕುರಿತು ಯಾರೇನೇ ಹೇಳಿದರೂ, ಮೈತ್ರಿ ಸಾಧಿತವಾಗಿ ಅವರು ಕರ್ನಾಟಕಕ್ಕೆ ಕಾಲಿಟ್ಟರೆ ನೋ ಡೌಟ್, ಒಂದಷ್ಟು ಪ್ರಮಾಣದ ಮುಸ್ಲಿಂ ಮತಗಳು ಜೆಡಿಎಸ್ ಕಡೆ ವಾಲುತ್ತವೆ. ಹೀಗಾಗಿ ಶಕ್ತಿಯ ದೃಷ್ಟಿಯಿಂದ ಇದುವರೆಗೆ ಮೂರನೇ ಸ್ಥಾನದಲ್ಲಿದ್ದಂತೆ ಕಾಣುತ್ತಿದ್ದ ಜೆಡಿಎಸ್ ಈಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಿದರೂ ಅಚ್ಚರಿಯಿಲ್ಲ ಎಂಬ ಮಾತು ಹಲವು ಕಾಂಗ್ರೆಸ್ ನಾಯಕರಿಂದಲೇ ಕೇಳಿ ಬರುತ್ತಿದೆ.
ಈಗಾಗಲೇ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ ಜತೆ, ಶರದ್ ಪವಾರ್ ನೇತೃತ್ವದ ಎನ್.ಸಿ.ಪಿ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ಜತೆಗೆ ಅಕ್ಬರುದ್ದೀನ್ ಓವೈಸಿ ನೇತೃತ್ವದ ಎ.ಐ.ಎಂ.ಐ.ಎಂ ಕೂಡಾ ಮೈತ್ರಿ ಮಾಡಿಕೊಂಡರೆ ಅದು ಮತ್ತಷ್ಟು ಬಲಿಷ್ಟ ಶಕ್ತಿಯಾಗುವುದು ಗ್ಯಾರಂಟಿ. ಕಾಂಗ್ರೆಸ್ ಕೋಟೆಯೊಳಗೆ ಈಗಾಗಲೇ ನುಗ್ಗಿರುವ ಶಾಸಕ ಜಮೀರ್ ಅಹ್ಮದ್ ಅವರಂತವರಿಗೆ ಸಿಎಂ ಸಿದ್ದರಾಮಯ್ಯ ನೀಡುತ್ತಿರುವ ಪ್ರಾಧಾನ್ಯ ಸಹಜವಾಗಿಯೇ ಇಬ್ರಾಹಿಂ ಅವರನ್ನು ಕೆರಳಿಸಿದೆ. ಹೀಗಾಗಿಯೇ ಅವರು ಇತ್ತೀಚೆಗೆ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಭವಿಷ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಿಲ್ಲದ ಮಾತು ಎಂದು ಗೊತ್ತಿದ್ದ ಮೇಲೂ ಸಿ.ಎಂ.ಇಬ್ರಾಹಿಂ ಅವರು ಈ ಉದ್ದೇಶಕ್ಕಾಗಿಯೇ ದೇವೇಗೌಡರನ್ನು ಭೇಟಿ ಮಾಡಿದ್ದರು
Comments