ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನನ್ನು ಬುಡ ಸಮೇತ ಕಿತ್ತು ಹಾಕಲು ಸಜ್ಜಾಗಿರುವ ಜೆಡಿಎಸ್..!!
ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರೊ. ರಾಜು ಅಲಗೂರು ಶಾಸಕರಾಗಿದ್ದರೂ ಇಲ್ಲಿನ ಶಾಸಕರು ಎಂ.ಬಿ. ಪಾಟೀಲರೇ ಎಂದು ಜನ ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ, ರಾಜು ಅಲಗೂರು, ಪಾಟೀಲರ ಹಿಂದೆ ಬಿದ್ದಿರುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಿರುವ ಮಧ್ಯೆ ಕ್ಷೇತ್ರ ಮತ್ತೊಂದು ಚುನಾವಣೆಗೆ ಸಿದ್ಧವಾಗಿದೆ. ರಾಜು ಕೂಡ ಮತ್ತೊಮ್ಮೆ ಕಣಕ್ಕೆ ಇಳಿಯುತ್ತಿದ್ದಾರೆ.
ರಾಜು ಅಲಗೂರು ಯಾವಾಗಲೂ ಸಚಿವ ಎಂ.ಬಿ. ಪಾಟೀಲ ಅವರ ಹಿಂದೆ ಇರುತ್ತಾರೆ. ಅವರು ಹೇಳಿದ ಮಾತನ್ನು ಚಾಚು ತಪ್ಪದೇ ಪಾಲಿಸುತ್ತಾರೆ. ಆದರೆ, ಕ್ಷೇತ್ರದ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸುತ್ತಿಲ್ಲ. ಸಚಿವರ ಹಿಂದೆ ಇದ್ದರೂ ಉತ್ತಮ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿಲ್ಲ. ಹಾಗೆಯೇ ಅನುದಾನ ತರುವಲ್ಲಿಯೂ ಶಾಸಕರು ವಿಫಲರಾಗಿದ್ದಾರೆ ಎಂದು ಕ್ಷೇತ್ರದ ಜನತೆ ಬೇಸರಿಸಿಕೊಳ್ಳುತ್ತಿದ್ದಾರೆ.ಸಚಿವರು ಹೇಳಿರುವ ಕೆಲಸವನ್ನಷ್ಟೇ ಶಾಸಕರು ಮಾಡಲು ಪ್ರಾಮಾಣಿಕತೆ ತೋರಿಸಿದ್ದಾರೆ. ಆದರೆ, ಕ್ಷೇತ್ರದ ರಸ್ತೆ ಸೇರಿದಂತೆ ಸಮಸ್ಯೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಉತ್ತಮ ರಸ್ತೆಗಳಿಲ್ಲದೆ ಹಳ್ಳಿಗಳ ಜನ ಪರದಾಡುತ್ತಿದ್ದಾರೆ. ಹಲವು ಹಳ್ಳಿಗಳ ಜನ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ರಾಜು ಅಲಗೂರು ಪ್ರೊಫೆಸರ್ ಆಗಿದ್ದರೂ ಆದರೆ, ಕ್ಷೇತ್ರದಲ್ಲಿನ ಶಿಕ್ಷಣ ವ್ಯವಸ್ಥೆ ತೀರಾ ಹದಗೆಟ್ಟಿದೆ ಎಂಬ ಬೇಸರದ ಮಾತುಗಳು ಕೇಳಿ ಬರುತ್ತಿವೆ.
ಇದು ಎಸ್ಸಿ ಮೀಸಲು ಕ್ಷೇತ್ರವಾದರೂ ಇಲ್ಲಿ ಲಿಂಗಾಯತ ಮತಗಳು ನಿರ್ಣಾಯಕವಾಗಿವೆ. ಕ್ಷೇತ್ರದಲ್ಲಿ 1.25 ಲಕ್ಷ ಲಿಂಗಾಯತ, ಎಸಿ, ಎಸ್ಟಿ 85 ಸಾವಿರ, ಬ್ರಾಹ್ಮಣ 20 ಸಾವಿರ, ಮುಸ್ಲಿಂ 20 ಸಾವಿರ ಸೇರಿದಂತೆ ಇನ್ನಿತರ 5 ಸಾವಿರ ಮತದಾರರು ಇದ್ದಾರೆ. ಹಾಲಿ ಶಾಸಕ ರಾಜು ಅಲಗೂರು ದಲಿತ ಸಮುದಾಯಕ್ಕೆ ಸೇರಿರುವ ವ್ಯಕ್ತಿ. ಕಳೆದ ಬಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಇತ್ತು.ಜೆಡಿಎಸ್ ನ ದೇವಾನಂದ ಚವ್ಹಾಣ ಈ ಬಾರಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಪಣತೊಟ್ಟಿದ್ದಾರೆ. ಅಲ್ಲದೇ, ಜನರ ಮಧ್ಯೆ ಇದ್ದು ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬಾರಿಯೂ ಜೆಡಿಎಸ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಹೀಗಾಗಿ ಇನ್ನೂ ಚಟುವಟಿಕೆಯಿಂದ ದೇವಾನಂದ ಕೆಲಸ ಮಾಡುತ್ತಿದ್ದಾರೆ. ಆದರೆ, ಇವುಗಳ ಮಧ್ಯೆ ಸಾಕಷ್ಟು ಚಟುವಟಿಕೆಯೊಂದಿಗೆ ದೇವಾನಂದ ಜನರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗುತಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲೆ ಬೇಸರಗೊಂಡಿರುವ ಜನರು ಜೆಡಎಸ್ ಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಎಲ್ಲೆಡೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರ ವರ್ಚಸ್ಸು ಜೋರಾಗಿರುವುದರಿಂದ ಈ ಬಾರಿ ಜೆಡಿಎಸ್ ನಾಗಠಾಣ ಕ್ಷೇತ್ರವನ್ನು ವಶಕ್ಕೆ ಪಡೆಯುವುದು ಖಚಿತ.
Comments