ಯಂಗ್ ಜನರೇಷನ್ ಡೈರೆಕ್ಟರ್ ಗಳಿಗೆ ಬುದ್ದಿವಂತನ ಐಡಿಯಾಲಜಿ..!!
ರಿಯಲ್ ಸ್ಟಾರ್ ಉಪೇಂದ್ರ ರವರು ತಮ್ಮ ನಟನೆ ನಿರ್ದೇಶನದಿಂದ ಕನ್ನಡ ಸಿನಿ ರಸಿಕರ ಮನ ತಣ್ಣಿಸಿದ್ದಾರೆ.ಅಲ್ಲದೆ ಉಪ್ಪಿ ನಿರ್ದೇಶನದ ಚಿತ್ರ ಎಂದರೆ ಅಭಿಮಾನಿಗಳ ತಲೆಯಲ್ಲಿ ಮೂಡುವುದೊಂದೇ ವಿಭಿನ್ನ ಕಥೆಯೊಂದಿಗೆ ಉಪ್ಪಿ ನಿರ್ದೇಶನ ಮಾಡುತ್ತಾರೆ ಅನ್ನೋದು.
ಉಪ್ಪಿ ಶಿವರಾಜ್ ಕುಮಾರ್ ನಿರೂಪಣೆ ಮಾಡುತ್ತಿರುವ ನಂ 1 ಯಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಈಗಿನ ಯಂಗ್ ಜನರೇಷನ್ ಡೈರೆಕ್ಟರ್ ಗಳಿಗೆ ಒಂದಿಷ್ಟು ಐಡಿಯಾ ಕೊಟ್ಟಿದ್ದಾರೆ. ಯಾರು ಏನು ಮಾಡಿದರೆ ಚಂದ ಅನ್ನೋದನ್ನು ತಿಳಿಸಿದ್ದಾರೆ. ಕನ್ನಡ ನಿರ್ದೇಶಕರಿಗೆ ಉಪ್ಪಿ ಕೊಟ್ಟ ಸಲಹೆಗಳೇನು ? ನಂ 1 ಯಾರಿ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ನಿರ್ದೇಶಕರಿಗೆ ನಿಮ್ಮ, ಸಲಹೆ ಎನ್ನುವ ಕೆಲವು ಪ್ರಶ್ನೆಗಳನ್ನ ಕೇಳಿದ್ದಾರೆ. ಪ್ರಶ್ನೆಗೆ ಉತ್ತರಿಸಿದ ಉಪ್ಪಿ ರಕ್ಷಿತ್ ಶೆಟ್ಟಿ ಅವರಿಗೆ ನಿರ್ದೇಶನ ಮಾಡಬೇಡಿ ಎಂದಿದ್ದಾರೆ. ಅಂದರೆ ತಕ್ಷಣಕ್ಕೆ ನಿಮ್ಮ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿದ್ದಾರೆ ಆದ್ದರಿಂದ ಸದ್ಯ ಅಭಿನಯ ಮಾಡಿ ನಂತರ ಚಿತ್ರಗಳಲ್ಲಿ ನಿರ್ದೇಶನ ಮಾಡಿ ಎಂದಿದ್ದರೆ. ಲೂಸಿಯಾ ಪವನ್ ಅವರ ಬಗ್ಗೆ ಮಾತನಾಡಿದ ಉಪೇಂದ್ರ ಹಾಲಿವುಡ್ ಸಿನಿಮಾ ಮಾಡುವ ಸಾಮರ್ಥ್ಯ ಇದೆ. ಆದ್ದರಿಂದ ನೀವು ಇಂಗ್ಲೀಷ್ ಚಿತ್ರ ನಿರ್ದೇಶನ ಮಾಡಿ ಎಂದು ಸಲಹೆ ನೀಡಿದ್ದಾರೆ.ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಸಿನಿಮಾವನ್ನ ಮೆಚ್ಚಿಕೊಂಡಿರುವ ಉಪ್ಪಿ ಅಂತದ್ದೇ ಚಿತ್ರವನ್ನ ಸಿಂಪಲ್ ಸುನಿ ನಿರ್ದೇಶನ ಮಾಡಬೇಕು ಎಂದಿದ್ದಾರೆ.
Comments