ದೇವಾಂಗ ಮಹಾ ಸಮ್ಮೇಳನ-2018 ಉದ್ಘಾಟನೆ ದೇವೇಗೌಡರು ಮಾಜಿ ಪ್ರಧಾನ ಮಂತ್ರಿಗಳು, ದಿವ್ಯಸಾನಿಧ್ಯ ಶ್ರೀ ದಯಾನಂದಪುರಿ ಮಹಾ ಸ್ವಾಮೀಜಿಯವರು
ಮಾರ್ಚ್ 4 ರಂದು ಬೆಳಿಗ್ಗೆ 8-30 ದತ್ತಾತ್ರೇಯ ಕಲ್ಯಾಣ ಮಂದಿರದ ಆವರಣದಲ್ಲಿ ಶ್ರೀ ಚೌಡೇಶ್ವರಿದೇವಿ ಅಮ್ಮನವರ ಪ್ರತಿಷ್ಠಾಪನೆ ಮತ್ತು ನಂದಿ ದ್ವಜಾರೋಹಣದೊಂದಿಗೆ ದೇವಾಂಗ ಮಹಾ ಸಮ್ಮೇಳನ ಕಾರ್ಯಕ್ರಮ ಆರಂಭವಾಗಲಿದೆ. 4ಮತ್ತು 5 ರಂದು ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀದಯಾ ನಂದಪುರಿ ಮಹಾಸ್ವಾಮೀಜಿಯವರು ವಹಿಸಲಿದ್ದಾರೆ, ಸಮ್ಮೇಳನಾಧ್ಯಕ್ಷರಾಗಿ ವಾಣಿಜ್ಯೋದ್ಯಮಿ ಶ್ರೀ ಹೆಚ್.ಪಿ.ಶಂಕರ್ ಭಾಗವಹಿಸಲಿರುವ ಈ ಕಾರ್ಯಕ್ರಮದ ಅಂಕುರಾರ್ಪಣೆಯನ್ನು ಶ್ರೀ ತಿಮ್ಮಶೆಟ್ಟಪ್ಪ, ಅಧ್ಯಕ್ಷರು ದೇವಾಂಗ ಮಂಡಲಿ ನೆರವೇರಿಸುವರು, ನಂದಿ ದ್ವಜಾರೋಹಣವನ್ನು ಶ್ರೀ ಮುನೇಗೌಡರು, ಕಾರ್ಯಾಧ್ಯಕ್ಷರು, ಒಕ್ಕಲಿಗರ ಸಂಘ, ಬೆಂ. ನೇರವೇರಿಸಲಿದ್ದಾರೆ, ಮದ್ಯಾನ್ಹ 2 ಘಂಟೆಗೆ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡರು, ಮಾಜಿ ಪ್ರಧಾನ ಮಂತ್ರಿಗಳು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕ ಶ್ರೀ ವೆಂಕಟರಮಣಯ್ಯ, ಮಾಜಿ ಶಾಸಕ ಶ್ರೀ ನರಸಿಂಹಸ್ವಾಮಿ, ಶ್ರೀ ಪಿ.ಸಿ. ಲಕ್ಷ್ಮೀನಾರಾಯಣ್, ನಗರಸಭಾ ಸದಸ್ಯರು ಭಾಗವಹಿಸಲಿದ್ದಾರೆ.
Comments