ಈ ಬಾರಿ ಇವರೇ ಸಿಎಂ ಎಂದು ಭವಿಷ್ಯ ನುಡಿದ ದೇವೇಗೌಡ್ರು..!!

25 Feb 2018 8:32 AM |
14333 Report

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ  ಎಲ್ಲಾ ಪಕ್ಷಗಳಲ್ಲಿಯೂ ಸಿಎಂ ಯಾರಾಗಬಹುದೆಂಬ ಚರ್ಚೆ ಜೋರಾಗಿದೆ.  ರಾಜಕೀಯದಲ್ಲಿರುವ ಮುತ್ಸದ್ಧಿ ನಾಯಕರೊಬ್ಬರು ಮುಂದಿನ ಸಿಎಂ ಇವರೇ ಎಂದು ಭವಿಷ್ಯ ನುಡಿದಿದ್ದಾರೆ.  

ಈ ಬಾರಿ ಯಾರು ಏನೇ ಮಾಡಿದರೂ 2018ಕ್ಕೆ ಎಚ್.ಡಿ.ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗೋದು.ಎಚ್ ಡಿಕೆ ಕುಂಡಲಿಯಲ್ಲಿದೆಯಂತೆ ಸಿಎಂ ಹುದ್ದೆ ಭಾಗ್ಯವಿದೆ. ನಾನೇ ಮನಸ್ಸು ಮಾಡಿದರೂ ಸಿಎಂ ಹುದ್ದೆ ಮಿಸ್ ಆಗಲ್ಲ ಎಂದು ರಾಜಕೀಯ ಮುತ್ಸದ್ಧಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.ಜೆಡಿಎಸ್ ಶಾಸಕರ ಜತೆ ಮಾತನಾಡುತ್ತಾ '2018ರ ಈ ವರ್ಷದಲ್ಲಿ ಕುಮಾರಸ್ವಾಮಿಗೆ ಸಿಎಂ ಹುದ್ದೆ ಬ್ರಹ್ಮಲಿಖಿತ. ರಾಜಕೀಯ ಇತಿಹಾಸದಲ್ಲಿ ನನ್ನ ಮಾತು ಸುಳ್ಳಾಗಿಲ್ಲ ಎಂದಿದ್ದಾರೆ. ಈ ಚುನಾವಣೆಯಲ್ಲಿ ನೀವು ಗೆದ್ದರೆ ನಿಮಗೆ ಸಚಿವ ಸ್ಥಾನ ಗ್ಯಾರಂಟಿ ಎಂದು ಜೆಡಿಎಸ್ ಪಕ್ಷದ ಪ್ರಭಾವಿ, ಜನಪ್ರಿಯ ಶಾಸಕರಿಗೆ ಗೌಡರು ಭರವಸೆ ನೀಡಿದ್ದಾರೆ. ಕುಮಾರಸ್ವಾಮಿ ಸರ್ಕಾರ ಬರುತ್ತೆ ನೀವು ಸಚಿವರಾಗ್ತೀರೆಂದು ಭರವಸೆ ನೀಡಿದ್ದಾರೆ. 

Edited By

Shruthi G

Reported By

hdk fans

Comments