ಅನಿತಾ ಕುಮಾರಸ್ವಾಮಿಯ ಗೆಲುವಿನ ಬಗ್ಗೆ ಮುನ್ಸೂಚನೆ ಕೊಟ್ಟ ಎಂ.ಸಿ ಅಶ್ವಥ್

ಜೆಡಿಎಸ್ ಈ ಬಾರಿ ಗೆಲ್ಲಲು ಸಜ್ಜಾಗುತ್ತಿದೆ.ಅಲ್ಲದೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಮಧ್ಯ ರಾಷ್ಟ್ರೀಯ ಪಕ್ಷಗಳಿಗೆ ಟಾಂಗ್ ನೀಡಲು ಜೆಡಿಎಸ್ ಮುಂದಾಗುತ್ತಿದೆ. ಚನ್ನಪಟ್ಟಣ ಕ್ಷೇತ್ರದಿಂದ ಶಾಸಕ ಸಿ.ಪಿ. ಯೋಗಿಶ್ವರ್ ಗೆ ಪ್ರತಿಸ್ಪರ್ಧಿಯಾಗಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿಯಾದರೇ ಜೆಡಿಎಸ್ ಗೆಲುವು ಸಾಧ್ಯ ಎಂದು ಮಾಜಿ ಶಾಸಕ ಎಂ.ಸಿ ಅಶ್ವಥ್ ತಿಳಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ. ಯೋಗಿಶ್ವರ್ ಗೆ ಟಾಂಗ್ ನೀಡಲು ಅನಿತಾ ಕುಮಾರಸ್ವಾಮಿ ಸ್ಪರ್ಧಿಸಬೇಕು. ಅನಿತಾ ಕುಮಾರಸ್ವಾಮಿ ನಿಂತರೆ ಮಾತ್ರ ಈ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯ ಎಂದು ಅಶ್ವಥ್ ತಿಳಿಸಿದ್ದಾರೆ. ಇನ್ನು ಅನಿತಾ ಕುಮಾರಸ್ವಾಮಿಯವರೇ ಈ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ, ಅದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
Comments