ದೇವಾಂಗ ಮಹಾಸಮ್ಮೇಳನ-2018 ಅಂಗವಾಗಿ ದೇವಾಂಗ ಜ್ಯೋತಿ ಮೆರವಣಿಗೆ




ಮಾರ್ಚ್ 4 ಮತ್ತು 5 ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ದೇವಾಂಗ ಮಹಾಸಮ್ಮೇಳನ 2018 ಅಂಗವಾಗಿ ಇಂದು ದೇವಾಂಗ ಜ್ಯೋತಿಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು, ಶ್ರೀ ರಾಮಲಿಂಗ ಚಂದ್ರಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮುಖಾಂತರ ಸಂಜೆ 7 ಘಂಟೆಗೆ ಆರಂಭವಾದ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾತ್ರಿ 9ಕ್ಕೆ ಮುಕ್ತಾಯವಾಯಿತು. ದೇವಾಂಗ ಮಂಡಲಿ ಅಧ್ಯಕ್ಷ ತಿಮ್ಮಶೆಟ್ಟಪ್ಪ ಮತ್ತು ನಿರ್ದೇಶಕರುಗಳು, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ಹಿರಿಯ ವಾಣಿಜ್ಯೋದ್ಯಮಿ ಹೆಚ್.ಪಿ. ಶಂಕರ್, ಸಮ್ಮೇಳನಾಧ್ಯಕ್ಷ ಗೋವಿಂದಪ್ಪ, ಕಾರ್ಯಧ್ಯಕ್ಷ ಕೃಷ್ಣಮೂರ್ತಿ, ಮಹಿಳಾ ಸಮಾಜದ ಕಾರ್ಯದರ್ಶಿ ದೇವಕಿ, ನಿರ್ದೇಶಕಿಯರಾದ ವತ್ಸಲ, ಗಿರಿಜ, ಆಂದ್ರ ದೇವಾಂಗ ಸಂಕ್ಷೇಮ ಟ್ರಸ್ಟ್ ಪದಾಧಿಕಾರಿಗಳು, ಕುಲಬಾಂಧವರು ಭಾಗವಹಿಸಿದ್ದರು. ಇಂತಹ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಕುಲಬಾಂಧವರು ಆಗಮಿಸಬೇಕು, ಪ್ರಚಾರದ ಕೊರತೆಯಿಂದಾಗಿ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಸಮಿತಿಯವರು ಪ್ರಚಾರ ಮಾಡಿ ಜನರನ್ನು ಕರೆತರದಿದ್ದರೆ ಸಮಾವೇಶದಲ್ಲಿ 50 ಸಾವಿರವಲ್ಲ 5 ಸಾವಿರ ಸೇರಿಸುವುದೂ ಕಷ್ಟ.
Comments