ಕೊಂಗಾಡಿಯಪ್ಪನವರ ಜನ್ಮದಿನೋತ್ಸವದ ಪ್ರಯುಕ್ತ ಕಾಲೇಜಿನಲ್ಲಿ 280 ಮಂದಿ ಯುವಕರಿಂದ ರಕ್ತದಾನ
ಲೋಕಸೇವಾನಿರತ ಡಿ.ಕೊಂಗಾಡಿಯಪ್ಪನವರ 158ನೇ ಜನ್ಮದಿನದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಕೊಂಗಾಡಿಯಪ್ಪ ಸ್ಮಾರಕ ವಿದ್ಯಾ ಸಂಸ್ಥೆಯ ಸುವರ್ಣ ಮಹೋತ್ಸವ ಭವನದಲ್ಲಿ ಏರ್ಪಡಿಸಿದ್ದರು. ಶಿಬಿರದಲ್ಲಿ 280 ಮಂದಿ ಯುವಕರು ರಕ್ತದಾನ ಮಾಡಿದರು, ಕೊಂಗಾಡಿಯಪ್ಪನವರು ಶಿಕ್ಷಣಕ್ಕೆ ಒತ್ತುನೀಡಿ ಸಾಮಾಜಿಕ ಬದಲಾವಣೆ ಕನಸು ಕಂಡಿದ್ದರು, ಅವರ ಹೆಸರಿನಲ್ಲಿ ಸಮಾಜಕ್ಕೆ ಒಳಿತಾಗುವ ಮಹತ್ವದ ಕೆಲಸಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಕಾರ್ಯದರ್ಶಿ ಆಶ್ವಥ್ಠಯ್ಯ ಹೇಳಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ., ಯೂತ್ ರೆಡ್ ಕ್ರಾಸ್ ಘಟಕಗಳ ನೇತೃತ್ವದಲ್ಲಿ, ಬೆಂಗಳೂರಿನ ವಿಜಯನಗರ ಲಯನ್ಸ್ ರಕ್ತನಿದಿ, ಎಸ್.ಕೆ. ರಕ್ತನಿದಿಗಳಿಂದ ರಕ್ತ ಸಂಗ್ರಹಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶಶಿಧರ್, ತಜ್ಮಲ್ ಪಾಷ, ಪ್ರೊ. ಚಂದ್ರಪ್ಪ, ಪ್ರೊ, ಅಮರನಾಥ್, ಆಡಳಿತ ಮಂಡಲಿಯ ನಿರ್ದೇಶಕರುಗಳು ಪಾಲ್ಗೊಂಡಿದ್ದರು.
Comments