ಧಾರಾವಾಹಿಯಲ್ಲಿ ಭೂತ ನೋಡಿ ಮಗು ಅಸ್ವಸ್ಥ .. ಇಂತಹ ಧಾರಾವಾಹಿಗಳನ್ನು ಚಿತ್ರೀಕರಿಸುವುದು ಎಷ್ಟು ಸರಿ ?

23 Feb 2018 2:55 PM |
1579 Report

ನಂದಿನಿ ಧಾರವಾಹಿ ಆಯ್ತು ಈಗ ಯಾರೇ ನೀ ಮೋಹಿನಿ ಕಾಟ ಶುರುವಾಗಿದೆ. ಯಾರೇ ನೀ ಮೋಹಿನಿ ಧಾರವಾಹಿಯಲ್ಲಿನ ಭೂತ ನೋಡಿ ಮಕ್ಕಳು ಹೆದರಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುವ ನಂದಿನಿ ಧಾರವಾಹಿಯ ಪಾತ್ರ ಅನುಕರಣೆ ಮಾಡಿ ಬಾಲಕಿಯೋರ್ವಳು ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಆದರೆ ಈಗ ನಂದಿನಿ ಧಾರವಾಹಿಯಲ್ಲ: ಯಾರೇ ನೀ ಮೋಹಿನಿ ಕಾಟ.ತುಮಕೂರು ನಗರದ ಬೈಲಾಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಇಂಡೋ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಧಾರವಾಹಿಯಲ್ಲಿನ ಭೂತದ ಕತೆ ಕೇಳಿ ಇಬ್ಬರು ಮಕ್ಕಳು ಹೆದರಿದ್ದಾರೆ. ಅದರಲ್ಲಿ ಓರ್ವ ಬಾಲಕಿ ಚಳಿ ಜ್ವರದಿಂದ ಅಸ್ವಸ್ಥಳಾಗಿದ್ದಾಳೆ. ಯಾರೇ ನೀ ಮೋಹಿನಿ ಧಾರವಾಹಿ ವೀಕ್ಷಿಸಿದ ಬಾಲಕಿ ಪುಷ್ಮಿತಾ ಶಾಲೆಗೆ ಬಂದು ತನ್ನ ಸಹಪಾಠಿ ಪ್ರತಿಕ್ಷಾಗೆ ಹೇಳಿದ್ದಾಳೆ. ಧಾರವಾಹಿಯಲ್ಲಿ ಇರುವಂತೆ ಶಾಲೆಯಲ್ಲೂ ಕೂಡಾ ಭೂತ-ಪಿಶಾಚಿ ಇದೆ ಎಂದು ಪುಷ್ಮಿತಾ ತಾನು ಹೆದರುವುದಲ್ಲದೆ ಪ್ರತಿಕ್ಷಾಗೂ ಹೆದರಿಸಿದ್ದಾಳೆ. ಈ ಭಯದಲ್ಲೇ ಮನೆಗೆ ಹೋಗಿದ್ದ ಪ್ರತಿಕ್ಷಾಗೆ ಚಳಿ-ಜ್ವರ ಕಾಣಿಸಿಕೊಂಡಿದೆ.

Edited By

Yuva Morcha

Reported By

Yuva Morcha

Comments