ಸರ್ವಕಾಲಿಕ ವ್ಯಕ್ತಿ ಲೋಕಸೇವಾನಿರತ ಶ್ರೀ ಕೊಂಗಾಡಿಯಪ್ಪ ದೇವಾಂಗ ಮಂಡಲಿಯಿಂದ ಸ್ಮರಣೆ

22 Feb 2018 3:08 PM |
581 Report

ಲೋಕಸೇವಾನಿರತ ಡಿ. ಕೊಂಗಾಡಿಯಪ್ಪನವರ 158ನೇ ಜನ್ಮದಿನಾಚರಣೆಯನ್ನು ದೇವಾಂಗ ಮಂಡಲಿಯಿಂದ ಆಚರಣೆ ಮಾಡಲಾಯಿತು, ಅಧ್ಯಕ್ಷರಾದ ತಿಮ್ಮಶೆಟ್ಟಪ್ಪನವರು ಮಂಡಲಿಯ ಪದಾಧಿಕಾರಿಗಳು, ಜನಾಂಗದ ಹಿರಿಯರು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಕೊಂಗಾಡಿಯಪ್ಪನವರ ಸೇವೆಯನ್ನು ಸ್ಮರಿಸಿ ವಂದನೆ ಸಲ್ಲಿಸಿದರು. ಶ್ರೀಯುತ ಡಿ.ಕೊಂಗಾಡಿಯಪ್ಪನವರ ಕಾರ್ಯಕ್ರಮಗಳು ಸರ್ವಕಾಲಿಕ ಅವರ ಆದರ್ಶಗಳನ್ನು ನಮ್ಮ ಇಂದಿನ ನಗರಸಭಾ ಸದಸ್ಯರುಗಳು ಹಾಗು ಅಧಿಕಾರವರ್ಗದವರು ಸೇರಿ ಚಿರಕಾಲ ಉಳಿಯುವಂತ ಕಾರ್ಯಕ್ರಮಗಳನ್ನ ಮಾಡಿ ಮಾದರಿ ದೊಡ್ಡಬಳ್ಳಾಪುರವಾಗಿ ಪರಿವರ್ತಿಸಲು ಪ್ರಯತ್ನ ಮಾಡಿ ಕೊಂಗಾಡಿಯಪ್ಪನವರ ಕನಸು ನನಸು ಮಾಡಲಿ ಎಂದು ರಾಜುರವರು ತಿಳಿಸಿದರು. ಸಂಕಣ್ಣನವರ ಕುಟುಂಬ ಸೇವಾ ಟ್ರಸ್ಟ್ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಹಾಜರಿದ್ದು ಗೌರವ ಸಲ್ಲಿಸಿದರು.

Edited By

Ramesh

Reported By

Ramesh

Comments