ಪುರಪಿತೃ ಲೋಕಸೇವಾನಿರತ ಡಿ. ಕೊಂಗಾಡಿಯಪ್ಪನವರು ೧೫೮ನೇ ಜನ್ಮದಿನಾಚರಣೆ
ನಗರದ ಅಭಿವೃದ್ದಿಗಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಲೋಕಸೇವಾನಿರತ ಡಿ. ಕೊಂಗಾಡಿಯಪ್ಪನವರು ಪ್ರಾತಸ್ಮರಣೀಯರು ಎಂದು ನಗರಸಭಾ ಅಧ್ಯಕ್ಷರಾದ ಶ್ರೀ. ತ.ನ.ಪ್ರಭುದೇವ್ ಅವರು ಕೊಂಗಾಡಿಯಪ್ಪನವರ 158ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಳತನ ಮತ್ತು ಸಜ್ಜನಿಕೆಯನ್ನು ಹೊಂದಿದ್ದ ಕೊಂಗಾಡಿಯಪ್ಪ ಅವರು ದೊಡ್ಡಬಳ್ಳಾಪುರಕ್ಕೆ ಆಗಬೇಕಾಗಿರುವ ಅಭಿವೃದ್ದಿ ಕಾರ್ಯಗಳನ್ನು ಅಧಿಕಾರಿಗಳಿಂದ ಸುಗಮವಾಗಿ ಮಾಡಿಸುತ್ತಿದ್ದರು. ದೊಡ್ಡಬಳ್ಳಾಪುರಕ್ಕೆ ವಿದ್ಯುತ್, ಕೊಳವೆ ಬಾವಿ, ಪ್ರೌಢಶಾಲೆ, ಆಸ್ಪತ್ರೆ, ಪಶು ವೈದ್ಯಶಾಲೆ, ಕೈಮಗ್ಗ ಮತ್ತು ಗೃಹ ಕೈಗಾರಿಕಾ ತರಬೇತಿ ಶಾಲೆಯನ್ನು ಮಂಜೂರು ಮಾಡಿಸಿ ಕೊಂಗಾಡಿ¬ಯಪ್ಪನವರು ಊರಿನ ಯಾವ ಸಮಸ್ಯೆಯನ್ನಾಗಲೀ ಬಗೆ ಹರಿಸಲು ದುಡಿಯುತ್ತಿದ್ದರು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಕೊಂಗಾಡಿಯಪ್ಪ ಅವರು ತಮ್ಮ ಸೇವಾ ಮನೋಭಾವದಿಂದ ಅವರ ಮನೆಯನ್ನು ವಿದ್ಯಾರ್ಥಿ ನಿಲಯವಾಗಿ ಮಾಡಿದ್ದರು. ಜಾತಿ ಬೇದವಿಲ್ಲದೆ ಬಡ ವಿದ್ಯಾರ್ಥಿಗಳು ಅವರ ಮನೆಯಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದರ, ಕೊಂಗಾಡಿಯಪ್ಪನವರ ನಿಸ್ವಾರ್ಥ ಸೇವಾ ಗುಣಗಳನ್ನು ಮೈಗೂಡಿಸಿಕೊಂಡರೆ ಪ್ರತಿಯೊಬ್ಬರು ಸಹ ಸಮಾಜವನ್ನು ಕಾಣುವ ದೃಷ್ಟಿಕೋನ ಬದಲಾಯಿಸಿಕೊಳ್ಳಬಹುದಾಗಿದೆ ಎಂದರು. ಈ ಸಂಧರ್ಭದಲ್ಲಿ ನಗರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಎಚ್.ಎಸ್. ಶಿವಶಂಕರ್ ರವರು ಮತ್ತು ಎಲ್ಲಾ ನಗರಸಭಾ ಸದಸ್ಯರು ಹಾಗೂ ನಗರಸಭಾ ಅಧಿಕಾರಿಗಳು ದೇವಾಂಗ ಜನಾಂಗದ ಹಿರಿಯರು, ಸಾರ್ವಜಮಿಕರು ಭಾಗವಹಿಸಿದ್ದರು.
Comments