ಬೆಳಗಾವಿ ಜನತಾಪರಿವಾರದ ಬಗ್ಗೆ ಕುತೂಹಲಕಾರಿ ವಿಷಯ ಬಿಚ್ಚಿಟ್ಟ ದೇವೇಗೌಡ್ರು...!!

ಜಿಲ್ಲೆಯ ಹಲವು ಪ್ರಮುಖ ನಾಯಕರು ಜೆಡಿಎಸ್ ಪಕ್ಷ ಸೇರುತ್ತಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.ಮೊನ್ನೆಯಷ್ಟೆ ಜೆಡಿಎಸ್ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಜಿಲ್ಲೆಯ ಹುಕ್ಕೇರಿ ಯಮಕನಮರಡಿ, ಅರಭಾಂವಿ ಮತಕ್ಷೇತ್ರಗಳಲ್ಲಿ ಜೆಡಿಎಸ್ ಕಣಕ್ಕೆ ಇಳಿಸುವ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡದಿರುವುದು ರಾಜಕೀಯ ಪಾಳೆಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಕ್ಷೇತ್ರಗಳ ಪ್ರಮುಖ ನಾಯಕರುಗಳು ಜೆಡಿಎಸ್‌ಗೆ ಮರಳುವ ಮುನ್ಸೂಚನೆ ಇರುವುದರಿಂದಲೇ ಈ ಮೂರು ಕ್ಷೇತ್ರಗಳಲ್ಲಿ ಹೆಸರನ್ನು ಘೋಷಣೆ ಮಾಡಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ.ಮೂಲ ಜನತಾ ಪರಿವಾರದವರು ಮತ್ತೆ ಜೆಡಿಎಸ್‌ಗೆ ಬರುತ್ತಾರೆ ಎಂಬ ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆಯು ಈ ಕುತೂಹಲಕ್ಕೆ ಕಾರಣವಾಗಿದೆ.
Comments