ಖಾಕಿ ಬಿಟ್ಟು ಜೆಡಿಎಸ್ ನಿಂದ ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾದ ಎಸಿಪಿ..!!
ಆಧುನಿಕ ಜಗತ್ತಿನಲ್ಲಿ ಕಾವಿ, ಖಾಕಿ, ಖಾದಿ ಬಹಳ ಬಲಿಷ್ಠ. ಖಾಕಿ ಮತ್ತು ಖಾದಿಗೆ ಬಹಳ ನಂಟು, ಸ್ನೇಹ, ಹಲವಾರು ಬಾಂಧವ್ಯದಿಂದಲೇ ಪೊಲೀಸ್ ಅಧಿಕಾರಿಗಳು ಖಾಕಿ ಕಳಚಿ ರಾಜಕೀಯಕ್ಕೆ ಬರುತ್ತಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿಮಾಡಿದ ಸೇವೆ, `ಘನ' ಕಾರ್ಯಗಳನ್ನು ಮುಂದಿಟ್ಟುಕೊಂಡು ಪೊಲೀಸರು ರಾಜಕೀಯ ಪ್ರವೇಶ ಮಾಡುತ್ತಿರುವುದು ಈಗ ಸರ್ವೆ ಸಾಮಾನ್ಯವಾಗಿದೆ. ಹೆಸರಾಂತ ಪೊಲೀಸ್ ಅಧಿಕಾರಿಗಳಾದ ಎನ್.ಕೃಷ್ಣಪ್ಪ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಎಸಿಪಿಯಾಗಿ ನಿವೃತ್ತಿ ಹೊಂದಿರುವ ಎನ್.ಕೃಷ್ಣಪ್ಪ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದಾರೆ.ಎನ್.ಕೃಷ್ಣಪ್ಪ ಅವರು ಯಲಹಂಕ ಪೊಲೀಸ್ ಠಾಣೆ ಮತ್ತು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಇನ್‍ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ.
Comments