ಪ್ರಧಾನಿ ಮೋದಿಗೆ ಪರಂ ಬಹಿರಂಗ ಸವಾಲ್: ಕಾಂಗ್ರೇಸ್ ಸರ್ಕಾರವನ್ನು 10 ಪರ್ ಸೆಂಟ್ ಸರ್ಕಾರ ಎನ್ನುವುದನ್ನು ಪ್ರೂವ್ ಮಾಡಿ ಇಲ್ಲವಾದರೆ ನೀವು ಸುಳ್ಳುಗಾರ ಎಂದು ಒಪ್ಪಿಕೊಳ್ಳಿ
ಕೊರಟಗೆರೆ ಫೆ. 18:- ಪರಮೇಶ್ವರ್ ನನ್ನು ಶಾಸಕ ಮಾಡಬೇಕು ಎಂದು ಕಾಂಗ್ರೇಸ್ ಬೆಂಬಲಿಸಬೇಡಿ ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೇಸ್ ಬೆಂಬಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಕಾಂಗ್ರೇಸ್ ಯುವ ಚೈನತ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕೊರಟಗೆರೆ ಫೆ. :- ಪರಮೇಶ್ವರ್ ನನ್ನು ಶಾಸಕ ಮಾಡಬೇಕು ಎಂದು ಕಾಂಗ್ರೇಸ್ ಬೆಂಬಲಿಸಬೇಡಿ ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೇಸ್ ಬೆಂಬಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಕಾಂಗ್ರೇಸ್ ಯುವ ಚೈನತ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯ ಜನರು ತಿನ್ನುವಂತಹ ಮಸಾಲೆ ದೋಸೆಗೂ ಶೇ. 18 ರಷ್ಟು ಜಿಎಸ್ಟಿಯನ್ನು ನಿಗದಿ ಮಾಡುವ ಮೂಲಕ ಬಿಜೆಪಿಯಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತೇವೆ ಎಂದು ಪರೋಕ್ಷವಾಗಿ ತಿಳಿಸಿದ್ದು ಇವರನ್ನು ರಾಜ್ಯದ ಜನ ತಿರಸ್ಕರಿಸುವುದು ಖಚಿತ ಎಂದರು.
ಯವಕರಿಂದ ಪ್ರಧಾನಿಯಾದವರು:- ನರೇಂದ್ರ ಮೋದಿ ದೇಶದ ಯುವಕರಿಂದಲೇ ಪ್ರಧಾನಿಯಾದವರು, ಯುವಕರು ಸಾಮಾಜಿ ಜಾಲ ತಾಣಗಳ ಮೂಲಕವೇ ಮೋದಿಯರನ್ನು ಪ್ರೀತಿ, ಹರಸಿ, ಪ್ರೋತ್ಸಾಹಿಸಿದರು, ಆದರೆ ಯುವಕರಿಗೆ ಉದ್ಯೋಗ ಸೃಷ್ಟಿಸುತ್ತೇನೆ ಎಂದ ಮೋದಿ ಯುಕರನ್ನೇ ಮರೆತಿದ್ದು ಮತ್ತೇ ಅದೇ ಯುವಕರೇ ಮೋದಿಗೆ ತಕ್ಕ ಪಾಠ ಕಲಿಸುತ್ತಾರೆ…
ನಾವೇ ಗ್ರೇಟ್:- ಬಿಜೆಪಿಯದು ಜಾತ್ಯಾತೀತದ ವಿರುದ್ಧವಾಗಿ ಹೊರಗಿಡುವ ತತ್ವ… ಕಾಂಗ್ರೇಸ್ ಪಕ್ಷ ಎಲ್ಲರನ್ನೂ ಒಂದುಗೂಡಿಸುವ ಪಕ್ಷ… ಜೆಡಿಎಸ್ ಪಕ್ಷ ಒಮ್ಮೆ ಜಾತ್ಯಾತೀತ ಮತ್ತೊಮ್ಮೆ ಎಲ್ಲರನ್ನೂ ಒಂದುಗೂಡುತ್ತೇವೆ ಎಂದು ಎರಡೂ ಕಡೆ ವಾಲುವ ಪಕ್ಷ ಆದ್ದರಿಂದ ಕಾಂಗ್ರೇಸ್ ಪಕ್ಷವೇ ಗ್ರೇಟ್
ಆನೇಮರಿ ಏನು ಮಾಡಕ್ಕಾಗಲ್ಲ:- ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಎಸ್ಬಿ ಆನೇಮರಿ ಇಡ್ಕೊಂಡು ಕರ್ನಾಟಕಕ್ಕೆ ಬಂದಿದ್ದಾರೆ ಅವರು ವೇಧಿಕೆಯಲ್ಲಿ ಭಾಷಣ ಮಾಡಿ ಕಾಂಗ್ರೇಸ್ ಎಸ್ಸಿ/ಎಸ್ಟಿ ವಿರುದ್ಧವಾದ ನೀತಿಯನ್ನು ಕಾಂಗ್ರೇಸ್ ಮಾಡುತ್ತಿದೆ ಎಂದು ಹೇಳಿಹೋಗಿದ್ದಾರೆ ವಾಸ್ತವದಲ್ಲಿ ಕಾಂಗ್ರೇಸ್ 24.1 ರಷ್ಟು ಹಣವನ್ನು ದಲಿತರಿಗೆ ಮೀಸಲಿಟ್ಟಿದ್ದು ಇದು ಮಾಯಾವತಿಗೆ ಗೊತ್ತಿಲ್ಲ ಆನೆ ಮರಿ ಆಟ ಕರ್ನಾಟಕದಲ್ಲಿ ನಡೆಯಲ್ಲ…
ಕುಮಾರಸ್ವಾಮಿಗೆ ಸಾಧ್ಯವಿಲ್ಲ:- ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ ಅವರ ಪ್ರಾಭಲ್ಯ ಕೇವಲ 5 ಜಿಲ್ಲೆಗೆ ಸೀಮಿತ ಅದೃಷ್ಟದ ಮುಖ್ಯಮಂತ್ರಿಯಾಗಿ 20 ತಿಂಗಳು ಆಡಳಿತ ನಡೆಸಿರುವ ಕುಮಾರಸ್ವಾಮಿ ಮತ್ತೆ ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಯಾಗಿ ಅಧಿಕಾರಕ್ಕೆ ಬಂದ 24 ಘಂಟೆಗಳೊಳಗೇ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಹೇಳಿತ್ತಿದ್ದಾರೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರೋದಿಲ್ಲ ರೈತರ ಸಾಲಾ ಮನ್ನವಾಗೋದಿಲ್ಲ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂತಿರುವ ಕುಮಾರಸ್ವಾಮಿ ಮತ್ತೆ ಕನಸ್ಸು ಕಾಣುತ್ತಿದ್ದಾರೆ.
ಮೋದಿಗೆ ಸವಾಲ್ :- ಸೋಮವಾರ ಮೈಸೂರಿಗೆ ಬರುತ್ತಿರುವ ಪ್ರಧಾನಿ ಮೋದಿ ನಮ್ಮ ಸರ್ಕಾರವನ್ನು 10 ಪರ್ ಸೆಂಟ್ ಸರ್ಕಾರ ಎಂದಿದ್ದಾರೆ ಯಾವ ಕೆಲಸಕ್ಕೆ, ಯಾವ ಮಂತ್ರಿಗೆ ಹಣ ನೀಡಿದ್ದಾರೆ ಎನ್ನುವುದನ್ನು ದಾಖಲೆಯ ಸಹಿತ ಸ್ಪಷ್ಟಪಡಿಸಬೇಕು ಇಲ್ಲವಾದಲ್ಲಿ ಮೋದಿ ಮಹಾ ಸುಳ್ಳುಗಾರ ಎನ್ನುವುದನ್ನು ಒಪ್ಪಿಕೊಳ್ಳಬೇಕು ಎಂದು ಬಹಿರಂಗ ಸವಾಲ್ ಹಾಕಿದರು
ಅವರೆಲ್ಲಾ ಚಿಲ್ಲರೆಗಳು:- ಪರಂ ವೈಟ್ ಕಾಲರ್, ಬಡವರನ್ನು ಹತ್ತಿರಕ್ಕೆ ಸೇರಿಸಲ್ಲ…. ಜನರ ಕಂಡರ್ರೆ ಹಿಂದಿನ ಬಾಗಿಲಿನಿಂದ ಹೋಗ್ ತ್ತಾರೆ.. ಅವರ ಮನೆಯ ಬಳಿ ನಾಯಿ ಬಿಟ್ಟಿರ್ ತ್ತಾರೆ ಎನ್ನುವ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುವವರೆಲ್ಲಾ ಚಿಲ್ಲರೆಗಳು ಅವರಿಂದ ಏನೂ ಮಾಡಲಾಗದೇ ಈ ರೀತಿ ಆರೋಪ ಮಾಡುತ್ತಾರೆ…
ರಾಜ್ಯ ಯುವ ಘಟಕದ ಮಾಜಿ ಅಧ್ಯಕ್ಷ ರಿಜ್ವಾನ್ ಹರ್ಷದ್ ಮಾತನಾಡಿ ರಾಜ್ಯದಲ್ಲಿ ನೇರ ಸ್ಪರ್ಧೆ ಇರುವುದು ಕಾಂಗ್ರೇಸ್ ಮತ್ತು ಬಿಜೆಪಿಗೆ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಅವರನ್ನು ಗಂಭೀರವಾಗಿ ನಾವು ಪರಿಗಣಿಸೇ ಇಲ್ಲಾ… ಅವರು ವ್ಯಾಪಾರ ಮಾಡಲು ಚಿಂಚಿಸುತ್ತಿದ್ದಾರೆ ಇದು ನಡೆಯೋದಿಲ್ಲ… ಅಪ್ಪ ಒಂದು ಪಕ್ಷದೊಟ್ಟಿಗೆ ಮಗ ಮತ್ತೊಂತು ಪಕ್ಷದೊಂದಿಗೆ ಮಾತನಾಡುತ್ತಾರೆ ಲೇವಡಿ ಮಾಡಿದರು.
ಬಿಜೆಪಿ ಭ್ರಷ್ಟರನ್ನು ಬೆಂಬಲಿಸುವ ಸರ್ಕಾರ ಇದಕ್ಕೆ ಉದಾಹರಣೆಯಾಗಿಯೇ ಮೋದಿ ಸ್ನೇಹಿತರಾದ ನೀರ್ ವ್ ಮೋದಿ 21 ಸಾವಿರ ಕೋಟಿ ಬ್ಯಾಂಕ್ ವಂಚಿಸಿದ್ದಾರೆ, ಅದೇ ರೀತಿ ಲಲಿತ್ ಮೋದಿ, ವಿಜಯಮಲ್ಲಯ ಇಂತಹವರು ಬಿಜೆಪಿಯಲ್ಲಿದ್ದಾರೆ ಇವರೇ ಹೆಚ್ಚು ಭ್ರಷ್ಠರು ಎಂದು ಟಾಂಗ್ ನೀಡಿದರು.
ಚಿತ್ರನಟಿ ಭಾವನಾ ಮಾತನಾಡಿ ಪರಮೇಶ್ವರ್ ಮೇಲಿರುವ ಪ್ರೀತಿ, ಅಭಿಮಾನ,ಕೇವಲ ವೇಧಿಯಲ್ಲಿದ್ದಾಗ ತೋರಿಸಬೇಡಿ ಚುನಾವಣೆಯ ವರೆಗೂ ಇಟ್ಟುಕೊಳ್ಳಿ.. ನನಗೆ ಯಾವುದೇ ರಾಜಯಕೀಯ ಹಿನ್ನೆಲೆಯಿಲ್ಲ ನನ್ನಂತವಳಿಗೆ ವೇಧಿಕೆಯಲ್ಲಿ ಅವಕಾಶವನ್ನು
Comments