ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಬಿ.ಸಿ. ಅನಿಲಕುಮಾರ್ ಗೌಡ?

ಯುವಕರ ಕಣ್ಮಣಿ, ಸಮಾಜ ಸೇವಾಕರ್ತ ಶ್ರೀ ಅನಿಲ್ ಕುಮಾರ್ ಗೌಡ ಜನತಾ ಪಕ್ಷದ ಅಭ್ಯರ್ಥಿಯಾಗುವ ಸೂಚನೆ ಹೊರಬಿದ್ದಿದೆ. ನಾಲ್ಕೈದು ವರ್ಷಗಳಿಂದ ಕ್ಷೇತ್ರದ ಯುವಕರೊಂದಿಗೆ ಸಂಪರ್ಕದಲ್ಲಿರುವ ಅನಿಲ್ ಕುಮಾರ್ ಗೌಡ ವಿಷಯ ಹೋರಬೀಳುತ್ತಿದ್ದ ಹಾಗೆ ಊರಿನ ಯುವಕರು ಉತ್ಸಾಹದಿಂದ ಚುನಾವಣೆಗೆ ರೆಡಿಯಾಗುತ್ತಿದ್ದಾರೆ. ತಮ್ಮ ಫೇಸ್ ಬುಕ್ ವಾಲ್, ವಾಟ್ಸಪ್ ಗ್ರೂಪ್ ನಲ್ಲಿ ವಿಷಯ ಹರಿದಾಡಿಸುತ್ತಿದ್ದಾರೆ. ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಇತ್ತೀಚೆಗೆ ಸಕ್ರಿಯವಾಗಿ ಕ್ಷೇತ್ರದಲ್ಲಿ ಓಡಾಡುತ್ತಿದ್ದರು, ಈಗ ಅನಿಲ್ ಕುಮಾರರ ಹೆಸರು ಈಚೆಗೆ ಬಂದಿದೆ, ಪಾರ್ಟಿಯಿಂದ ಅಭ್ಯರ್ಥಿ ಯಾರಾಗುತ್ತಾರೆ? ಸ್ವಲ್ಪದಿನದಲ್ಲೇ ಉತ್ತರ ದೊರೆಯಲಿದೆ.
Comments