ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ದೇವೇಗೌಡರು ಗೈರಾಗಿದ್ದು ಯಾಕೆ?
ಇತಿಹಾಸ ಪ್ರಸಿದ್ಧ ಶ್ರಾವಣ ಬೆಳಗೊಳದ ಬಾಹುಬಲಿಯ ಮಹಾಮಸ್ತಾಭಿಷೇಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಹಾಜರಿರಬೇಕಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು.ಅಷ್ಟಕ್ಕೂ ಗೌಡರು ಗೈರಾಗಿದ್ದೇಕೆ ?
ಈ ಬಾರಿಯ ಮಹಾಮಸ್ತಕಾಭಿಷೇಕಕ್ಕೆ ಕೇಂದ್ರದ ದೇಣಿಗೆ ಪಡೆಯಲು ಹೆಚ್.ಡಿ.ದೇವೇಗೌಡರು ಸತತ ಪ್ರಯತ್ನ ಮಾಡಿಯೂ ವಿಫಲರಾಗಿದ್ದರು. ಇದಕ್ಕಾಗಿ ಅವರು ಪ್ರಧಾನಿ ಮೋದಿ ಅವರನ್ನು ನಾಲ್ಕೈದು ಬಾರಿಯಾದರೂ ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು. ಕಳೆದ ಬಾರಿಯ ಮಹಾಮಜ್ಜನಕ್ಕೆ ಆಗಿನ ಕೇಂದ್ರ ಸರಕಾರವು 150 ಕೋಟಿ ರೂ. ಕೊಟ್ಟಿತ್ತು. ಈ ಬಾರಿಯೂ ಕೇಂದ್ರದಿಂದ ಉದಾರ ದೇಣಿಗೆ ಸಿಗಬಹುದೆಂದು ದೇವೇಗೌಡರು ನಿರೀಕ್ಷಿಸಿದ್ದರು. ಆದರೆ, ಪ್ರಧಾನಿ ಮೋದಿ ಅವರು ಕವಡೆ ಕಾಸನ್ನೂ ಕೊಡಲಿಲ್ಲ. ಇದು ಜೆಡಿಎಸ್ ಮುಖ್ಯಸ್ಥರ ಕೋಪಕ್ಕೆ ಕಾರಣವೆನ್ನಲಾಗಿದೆ. ಇದೇ ಕಾರಣಕ್ಕೆ ಅವರು ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆಂದು ಕೆಲ ಮೂಲಗಳಿಂದ ತಿಳಿದುಬಂದಿದೆ.
Comments