ಪ್ರಜ್ವಲ್ ರೇವಣ್ಣ ಚುನಾವಣಾ ಅಖಾಡಕ್ಕಿಳಿಯುವುದು ಖಚಿತ… ಯಾವ ಕ್ಷೇತ್ರದಿಂದ ಗೊತ್ತಾ?
ಪ್ರಜ್ವಲ್ ರೇವಣ್ಣ ಎಲೆಕ್ಷನ್ಗೆ ನಿಲ್ತಾರೋ ಇಲ್ವೋ? ಅವರಿಗೆ ಟಿಕೆಟ್ ಸಿಗುತ್ತೋ ಇಲ್ವೋ? ಅನ್ನೋ ಗೊಂದಲಕ್ಕೆ ಸದ್ಯದಲ್ಲೇ ತೆರೆಬೀಳಲಿದೆ.
ನಾಲ್ಕು ದಿನಗಳ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡರು ಹಾಗೂ ಕುಟುಂಬಸ್ಥರ ನಡುವೆ ನಡೆದ ಮಾತುಕತೆ ವೇಳೆ ಪ್ರಜ್ವಲ್ಗೆ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯ ಮೂಡಿದೆ.ವಿಶೇಷವಾಗಿ ದೇವೇಗೌಡರೇ ಈ ಬಗ್ಗೆ ಆಸಕ್ತಿ ತೋರಿಸಿ ಟಿಕೆಟ್ ನೀಡುವಂತೆ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಯಲಹಂಕ ಅಥವಾ ರಾಜರಾಜೇಶ್ವರಿ ನಗರ ಈ ಎರಡು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂಬುದು ಕೂಡ ಚರ್ಚೆಯಾಗಿದೆ. ಇದರಿಂದಾಗಿ ಪ್ರಜ್ವಲ್ ರೇವಣ್ಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸೋದು ಬಹುತೇಕ ಖಚಿತವಾದಂತಾಗಿದೆ.
Comments