ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ, ದುರ್ಗಾಂಭಿಕಾ ಕನ್ನಡ ಯುವಕ ಸಂಘ ಇವರಿಂದ ಉಚಿತ ಆರೋಗ್ಯ ತಪಾಸಣೆ
ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ, ಜಿಲ್ಲಾ ಪಂಚಾಯತ್, ಬೇಂ. ನಗರ, ಗ್ರಾ. ಜಿಲ್ಲೆ ಹಾಗೂ ದುರ್ಗಾಂಭಿಕಾ ಕನ್ನಡ ಯುವಕ ಸಂಘ ಇವರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣಾ ಕಾರ್ಯಕ್ರಮ ಇಂದು ಕುಚ್ಚಪ್ಪನಪೇಟೆಯಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ತಜ್ಞ ವೈದ್ಯರುಗಳು ಹಾಜರಿದ್ದು ಮಧುಮೇಹ, ಚರ್ಮರೋಗ, ರಕ್ತದೊತ್ತಡ, ಬೊಜ್ಜು, ಬೆನ್ನುನೋವು, ಅಸ್ತಮಾ ಮುಂತಾದ ಖಾಯಿಲೆಗಳಿಗೆ ತಪಾಸಣೆ ನಡೆಸಿ ಉಚಿತವಾಗಿ ಔಷದಿ ವಿತರಿಸಿದರು. ಸ್ಥಳೀಯ ಮುಖಂಡರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
Comments