ದೊಡ್ಡಬಳ್ಳಾಪುರ ನಗರದ 11ನೇ ವಾರ್ಡ್ ಕರೇನಹಳ್ಳಿಯಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮ
ಮಾಜಿ ಶಾಸಕರಾದ ಜೆ.ನರಸಿಂಹಸ್ವಾಮಿ ರವರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ನಗರದ 11ನೇ ವಾರ್ಡ್ ಕರೇನಹಳ್ಳಿಯಲ್ಲಿ ಇಂದು ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನೆರವೇರಿತು, ನಗರಸಭಾ ಮಾಜಿ ಅಧ್ಯಕ್ಷರು ಕೆ.ಬಿ ಮುದ್ದಪ್ಪ, ಬಿಜೆಪಿ ನಗರ ಅಧ್ಯಕ್ಷರು ಕೆ.ಎಚ್ ರಂಗರಾಜು, ಜಿಲ್ಲಾ ಬಿಜೆಪಿ ಯುವಮೋರ್ಚಾ ಹಾಗೂ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಎಚ್.ಎಸ್ ಶಿವಶಂಕರ್, ನಗರಸಭಾ ಸದಸ್ಯರಾದ ಕೆ.ಎಚ್ ವೆಂಕಟರಾಜು. ಚಂದ್ರಶೇಖರ್, ನಗರ ಪ್ರಧಾನ ಕಾರ್ಯದರ್ಶಿ ಬಿ.ಜಿ ಶ್ರೀನಿವಾಸ್, ಸುಬ್ರಮಣಿ, ನಗರ ಒ.ಬಿ.ಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮೀನಾರಾಯಣ್, ತಾಲ್ಲೂಕು ಬಿಜೆಪಿ ವಕ್ತಾರ ಮುತ್ತಣ್ಣ, ಇನ್ನು ಮುಂತಾದ ಮುಖಂಡರುಗಳು ಉಪಸ್ಥಿತರಿದ್ದರು.
Comments