ಇಕ್ಬಾಲ್ ಅನ್ಸಾರಿಯ ರಾಜಕೀಯ ಜೀವನಕ್ಕೆ ಎಳ್ಳು ನೀರು ಬಿಡಲು ದೇವೇಗೌಡರು ಸಜ್ಜು..!!
ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯ ತಂತ್ರದಲ್ಲಿ ನಿಪುಣರು ವಿರೋಧ ಪಕ್ಷದವರನ್ನು ಹೇಗೆ ಬಗ್ಗು ಬಡಿಯಬೇಕು ಎಂಬುದನ್ನು ಚನ್ನಾಗಿಯೇ ಅರಿತಿದ್ದಾರೆ. ಗೌಡರ ರಣತಂತ್ರಕ್ಕೆ ರಾಷ್ಟ್ರೀಯ ಪಕ್ಷಗಳೇ ತಲೆಬಾಗಿವೆ. ಈ ಬಾರಿ ಜೆಡಿಎಸ್ ಅನ್ನು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಮಹಾ ದಾಸೆ ಹೊಂದಿರುವ ಗೌಡರು ವಿರೋಧ ಪಕ್ಷಗಳ ತಂತ್ರಕ್ಕೆ ಪ್ರತಿ ತಂತ್ರ ಸಿದ್ದಮಾಡಿಕೊಳ್ಳಲಿದ್ದಾರೆ.
ಕ್ಷೇತ್ರದ ಶಾಸಕ ಲಿಕ್ಕರ್ ಕಿಂಗ್ ಇಕ್ಬಾಲ್ ಅನ್ಸಾರಿಯ ನಾಗಾಲೋಟಕ್ಕೆಮಾಜಿ ಪ್ರಧಾನಿ ದೇವೇಗೌಡರು ತೊಡರುಗಾಲು ಹಾಕಿರುವ ಪರಿಣಾಮ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಸರಳ ದಾರಿ ಲಕ್ಷಣಗಳಿವೆ. ಭತ್ತದ ನಾಡಿನಲ್ಲಿ ದೇವೇಗೌಡರು ಹೂಡಿರುವ ದಾಳದ ಪರಿಣಾಮ ಈ ಬಾರಿ ಜೆಡಿಎಸ್ ಗೆ ಗೆಲುವು ಖಚಿತವೆಂದು ಮೂಲಗಳಿಂದ ತಿಳಿದು ಬಂದಿದೆ.ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯದ ಎಲ್ಲ ಪಟ್ಟುಗಳನ್ನು ಬಲ್ಲವರು. ಮುಂಬರುವ ಚುನಾವಣೆಯಲ್ಲಿ ಅನ್ಸಾರಿಯ ರಾಜಕೀಯ ಜೀವನ ಕೊನೆಗಾಣಿಸಲು ಮಾಜಿ ಸಂಸದ ಎಚ್.ಜಿ.ರಾಮುಲು ಮನೆಯ ಕದವನ್ನು ತಟ್ಟಿದ್ದಾರೆ. ಈಗ ಅನ್ಸಾರಿಯನ್ನು ಕೊನೆಗಾಣಿಸಲು ರಾಮುಲು ಪುತ್ರ ಶ್ರೀನಾಥರನ್ನು ಆಯುಧವನ್ನಾಗಿ ಬಳಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ.
Comments