ಜೆಡಿಎಸ್ ನಾಯಕರ ಶಕ್ತಿ ಹೆಚ್ಚಿಸಿದ ವಿಕಾಸಪರ್ವ..!
ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ನಡೆದ ಜೆಡಿಎಸ್ ವಿಕಾಸಪರ್ವ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿರುವುದು ಜೆಡಿಎಸ್ ನಾಯಕರಲ್ಲಿ ಹುಮ್ಮಸ್ಸು ಮೂಡಿಸಿದೆ. ಅಲ್ಲದೆ ವಿಕಾಸ ಪರ್ವ ಯಶಸ್ಸನ್ನು ಕಂಡು ವಿಪಕ್ಷಗಳು ನಿಬ್ಬೆರಗಾಗಿವೆ. ಜೆಡಿಎಸ್ ರಾಷ್ಟ್ರೀಯ ಪಕ್ಷಗಳಿಗೆ ತನ್ನ ಸಾಮರ್ಥ್ಯ ತೋರಿಸುವಲ್ಲಿ ಯಶಸ್ವಿಯಾಗಿದೆ.
ಮತ್ತೆ ಸರ್ವ ಸಮುದಾಯವನ್ನು ತಮ್ಮೊಂದಿಗೆ ಕರೆದೊಯ್ಯುವ ಪ್ರಯತ್ನವನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಮಾಡಿದ್ದಾರೆ. ಬಿಎಸ್‍ಪಿ ನಾಯಕಿ ಮಾಯಾವತಿಯನ್ನು ಕರೆತರುವ ಮೂಲಕ ದಲಿತ ಸಮುದಾಯದ ಮನವೊಲಿಸುವ ಯತ್ನ ಮಾಡಿದ್ದಾರೆ. ವಿಧಾನಸಭಾ ಚುನಾವಣೆಗೆ ದಿನಗಳು ಬಾಕಿ ಇರುವುದರಿಂದ ಒಂದೊಂದು ದಿನವೂ ಸಂಘಟನೆಯ ದೃಷ್ಠಿಯಿಂದ ಅಮೂಲ್ಯವಾಗಿದೆ. ಈಗಾಗಲೇ ವಿಕಾಸಪರ್ವ ಯಾತ್ರೆ ಯಶಸ್ವಿಯಾಗಿದ್ದು, ಇದುವರೆಗೆ ಯಾತ್ರೆ ನಡೆಸಿದ ಸ್ಥಳಗಳಲ್ಲಿ ಉತ್ತಮ ಸ್ಪಂದನೆ ದೊರೆತಿದೆ.
Comments