ವಿಪಕ್ಷಗಳಿಗೆ ತಟ್ಟಿದ ವಿಕಾಸ ಪರ್ವದ ಎಫೆಕ್ಟ್..!!
ಜೆಡಿಎಸ್ ವಿಕಾಸ ಪರ್ವ ಸಮಾವೇಶದ ಮೂಲಕ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದೆ. ಇತಿಹಾಸದಲ್ಲೇ ಮೊದಲು ಸಾಗರದಂತೆ ಹರಿದು ಬಂದ ಕರುನಾಡ ಜನತೆಯನ್ನು ಕಂಡು ವಿಪಕ್ಷಗಳು ಧಿಗ್ಬ್ರಮೆಗೊಂಡಿದ್ದಾರೆ. ವಿಕಾಸ ಪರ್ವವು ವಿಪಕ್ಷಗಳ ನಾಯಕರಲ್ಲಿ ಭೀತಿ ಮೂಡಿಸಿದೆ .ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ಮೂಲಕ ರಾಜಧಾನಿ ಬೆಂಗಳೂರಿನಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನದಲ್ಲಿ ಯಶಸ್ವಿಗೊಂಡಿದೆ ಎನ್ನಲಾಗಿದೆ.ಇದಕೆ ಸಾಕ್ಷಿಯಾಗಿರು ಸಾಗರದಂತೆ ಹರಿದು ಬಂದ ಕರುನಾಡ ಜನತೆ ಎಂದೇ ಹೇಳಬಹುದು.
ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಹರಿದು ಬಂದ ಜನಸಾಗರ.ಹಲವಾರು ಕಡೆಗಳಿಂದ ಸುಮಾರು 5 ಸಾವಿರ ಬಸ್ ಗಳು ಜಾಮ್ ನಲ್ಲಿ ಸಿಲುಕಿ ಬರಲಾಗದೆ ಹಿಂದಿರುಗಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಮೂಲಗಳು ತಿಳಿಸಿವೆ.ಜೆಡಿಎಸ್ ಬೆಂಗಳೂರಿನ ಯಲಹಂಕದಲ್ಲಿ ಸುಮಾರು 12 ಲಕ್ಷ ಜನ ಸೇರಿಸಿ ಭರ್ಜರಿಯಾಗಿ ಬಲ ಪ್ರದರ್ಶನ ಮಾಡಿದೆ. ಕಾರ್ಯಕ್ರಮದಲ್ಲಿ ಆರಂಭದಲ್ಲೇ ಭಾವುಕರಾಗಿ ಭಾಷಣ ಶುರು ಮಾಡಿದ ಕುಮಾರಸ್ವಾಮಿ, ನನ್ನ ಈ ಜೀವನ ನಿಮಗೆ ಮೀಸಲು, ರೈತರ, ಬಡವರ ಸೇವೆಗೆ ನಾನು ಸದಾ ಸಿದ್ದ ಅಂತಾ ಹೇಳಿದರು.ನಗರದ ಹೊರವಲಯದ ಯಲಹಂಕ ಸಮೀಪ ಆಯೋಜಿಸಿದ್ದ ಸಮಾವೇಶದಲ್ಲಿ ಬೃಹತ್ 126 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಗೆ ಮುಂಚೆಯೇ "ದಳಪತಿ'ಗಳನ್ನು ಅಖಾಡಕ್ಕೆ ಇಳಿಸಿ ಸೆಡ್ಡು ಹೊಡೆದಿದ್ದಾರೆ.ಸಮಾವೇಶದಲ್ಲಿ ಬೃಹತ್ ಜನಸ್ತೋಮ ಕಂಡು ಸಂತಸಗೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ, ಚುನಾವಣೆ ಮುಗಿಯುವವರೆಗೂ ಯಾರೂ ವಿಶ್ರಮಿಸಬೇಡಿ. ಇಲ್ಲಿಗೆ ಬಂದಿರುವ ಒಬ್ಬೊಬ್ಬರೂ ಕುಮಾರಸ್ವಾಮಿಯಾಗಿ ಕೆಲಸ ಮಾಡಿ ಎಂದು ಹುಮ್ಮಸ್ಸು ತುಂಬಿದರು.ಸಮಾವೇಶಲ್ಲಿ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಪಾಲ್ಗೊಂಡಿದ್ದು ವಿಶೇಷ. ರಾಜ್ಯದಲ್ಲಿ ಜೆಡಿಎಸ್-ಬಿಎಸ್‌ಪಿ ಜತೆಗೂಡಿ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಈ ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಬೇಕೋ ಬೇಡವೋ ಎಂದು ಜನರೇ ತೀರ್ಮಾನ ಮಾಡುವ ಕಾಲ ಬಂದಿದ್ದು, ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ತೀರುತ್ತದೆ ಎಂದು ಹೇಳಿದರು. ಜೆಡಿಎಸ್ ಸತ್ತೇ ಹೋಯಿತು ಎಂದು ಹೇಳಿದ ಸಿದ್ದರಾಮಯ್ಯನವರೇ ಇಲ್ಲಿ ಬಂದು ನೋಡಿ ಜೆಡಿಎಸ್ ಶಕ್ತಿ ಗೊತ್ತಾಗುತ್ತದೆ ಎಂದು ಗುಡುಗಿದರು.ಲೋಕಸಭೆಯ ಎರಡು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ ಮಾತ್ರಕ್ಕೆ ಜೆಡಿಎಸ್ ಕಥೆ ಮುಗಿಯಿತು ಎಂದು ಹೇಳಿದರು. ಪಕ್ಷದ ಕಚೇರಿ ಕಿತ್ತಿಕೊಂಡು ಇನ್ನೆಲ್ಲಿ ನೆಲೆ ಎಂದು ಕುಹಕವಾಡಿದರು. ಆದರೆ, ಇಂದು ಕಾಂಗ್ರೆಸ್‌ನವರ ಕಣ್ಣು ಕುಕ್ಕುವಂತೆ ಜೆಡಿಎಸ್ ಕಟ್ಟಡ ಎದ್ದು ನಿಂತಿದೆ ಎಂದು ಹೇಳಿದರು.ಕರ್ನಾಟಕದಲ್ಲಿ ಜೆಡಿಎಸ್ ಅನ್ನು ಸರ್ವನಾಶ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಇಲ್ಲಿ ನೆರೆದಿರುವ ಲಕ್ಷಾಂತರ ಸಮೂಹ ಸಾಕ್ಷಿ ಎಂದರು.ಎಚ್.ಡಿ.ಕುಮಾರಸ್ವಾಮಿ ಯಾರ ಹಂಗೂ ಇಲ್ಲದೆ ಸ್ವಂತ ಶಕ್ತಿ ಮೇಲೆ ಮತ್ತೂಮ್ಮೆ ಈ ನಾಡಿನ ಮುಖ್ಯಮಂತ್ರಿಯಾಗಲಿದ್ದಾರೆ. ನಾನು ಪುತ್ರ ವ್ಯಾಮೋಹ ಅಥವಾ ಅತಿಶಯೋಕ್ತಿಯಿಂದ ಹೇಳುತ್ತಿಲ್ಲ. ರಾಜ್ಯದ ಜನರ ನಾಡಿ ಮಿಡಿತ ನನಗೆ ಗೊತ್ತಿದೆ ಎಂದು ಹೇಳಿದರು.
ಬಜೆಟ್‌ನಲ್ಲಿ ಏನೋ ಕೊಟ್ಟು ಬಿಟ್ಟಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಜ್ಯದ ರೈತರ ಪರಿಸ್ಥಿತಿ ಏನಾಗಿದೆ ಎಂಬುದು ಗೊತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಬಜೆಟ್‌ಗೆ ತಿರುಗೇಟು ನೀಡಿದರು.ರಾಜ್ಯದಲ್ಲಿ ತೆಂಗು ಮತ್ತು ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. 1.50 ಲಕ್ಷ ಹೆಕ್ಟೇರ್ ಮುಸುಕಿನ ಜೋಳ ಹಾಳಾಗಿದೆ. ಫೋಟೋ ಸಹಿತ ಪ್ರಧಾನಿ ನರೇಂದ್ರಮೋದಿ, ಕೇಂದ್ರದ ಕೃಷಿ ಸಚಿವರಿಗೆ ತೋರಿಸಿದರೂ ಕರುಣೆ ಬರಲಿಲ್ಲ ಎಂದು ನೋವು ವ್ಯಕ್ತಪಡಿಸಿದರು.ಜೆಡಿಎಸ್ ಮುಂದಿನ ವಿಧಾನಸಭೆ ಚುನಾವಣೆಗೆ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಡಿದೆ. ದಲಿತ ವರ್ಗಕ್ಕೆ ನ್ಯಾಯ ಕಲ್ಪಿಸುವ ಆಶಯದೊಂದಿಗೆ ಕಾನ್ಶಿàರಾಂ ಸ್ಥಾಪಿಸಿದ ಬಹುಜನ ಸಮಾಜ ಪಕ್ಷದ ನೇತೃತ್ವ ವಹಿಸಿರುವ ಮಾಯಾವತಿ ಅವರು ಅಂಬೇಡ್ಕರ್ ಸಿದ್ಧಾಂತ ಪಾಲಿಸುತ್ತಿರುವ ಹೆಣ್ಣುಮಗಳು. ರಾಜ್ಯದ 224 ಕ್ಷೇತ್ರಗಳಲ್ಲೂ ಜೆಡಿಎಸ್ ಕಾರ್ಯಕರ್ತರು ಎಚ್.ಡಿ.ಕುಮಾರಸ್ವಾಮಿ ಜತೆ ಮಾಯಾವತಿ ಫೋಟೋ ಹಾಕಬೇಕು ಎಂದು ಕರೆ ನೀಡಿದರು.ಬಿಎಸ್‌ಪಿ ಶಕ್ತಿ ಎಷ್ಟೇ ಇರಲಿ ನಾವು ಬಳಕೆ ಮಾಡಿಕೊಳ್ಳೋಣ. ಅವರಿಗೆ ಬಿಟ್ಟುಕೊಟ್ಟಿರುವ 20 ಕ್ಷೇತ್ರಗಳಲ್ಲಿ ನಮ್ಮ ಶಕ್ತಿ ಧಾರೆ ಎರೆಯೋಣ. ಇದರಲ್ಲಿ ಕಿಂಚಿತ್ತು ವ್ಯತ್ಯಾಸವಾದರೂ ನನಗೆ ನೋವಾಗುತ್ತದೆ ಎಂದು ಹೇಳಿದರು.ಇಡೀ ಭಾಷಣದಲ್ಲಿ ಮಾಯಾವತಿ ಅವರನ್ನು ಹೊಗಳಿದ ದೇವೇಗೌಡರು, ಬಿಎಸ್‌ಪಿ ಜತೆಗಿನ ಮೈತ್ರಿಯಿಂದಾಗಿ ನಮಗೆ ಆನೆ ಬಲ ಬಂದಿದೆ ಎಂದು ಹೇಳಿದರು.ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಏನು ಮಾಡಿದೆ, ಏನು ಮಾಡಿಲ್ಲ ಎಂಬುದನ್ನು ನಾನು ಟೀಕಿಸಲು ಹೋಗುವುದಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ 18 ತಿಂಗಳು ಮಾಡಿರುವ ಕೆಲಸ ಇಂದಿಗೂ ನೆನೆಯುತ್ತಾರೆ. ಅದೇ ಅವರಿಗೆ ಶ್ರೀರಕ್ಷೆ ಎಂದು ತಿಳಿಸಿದರು.ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ದಲಿತ ವರ್ಗವನ್ನು ಮತಬ್ಯಾಂಕ್ ಮಾಡಿಕೊಂಡು ಇಷ್ಟು ವರ್ಷ ಆಳಿದರೂ ಆ ವರ್ಗಕ್ಕೆ ಏನೂ ಮಾಡಲಿಲ್ಲ ಎಂದು ದೂರಿದರು.
Comments