ಬಂಜಾರ ಸಮುದಾಯ ಮುಖ್ಯವಾಹಿನಿಗೆ ಬರಬೇಕು : ಶಾಸಕ ಪಿ.ಆರ್ ಸುಧಾಕರಲಾಲ್.

ಕೊರಟಗೆರೆ ಫೆ.:-ಸಕರ್ಾರ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಸಂತ ಶ್ರೀಸೇವಾಲಾಲ್ರ 279 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಂಜಾರ ಸಮಾಜದ ಯುವಕರಿಗೆ ಧೈರ್ಯ ಮತ್ತು ಆತ್ಮವಿಶ್ವಾಸದ ಮೂಲಕ ಆತ್ಮಾಭಿಮಾನ ತುಂಬಿದ ಮಹಾನ್ ನಾಯಕ ಸಂತ ಸೇವಾಲಾಲ್. ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರು ಸಮಾಜಕ್ಕೆ ತಮ್ಮದೇ ಆದ ಕೂಡುಗೆಯನ್ನು ನೀಡಬೇಕು.
ತಹಶೀಲ್ದಾರ್ ವರದರಾಜು ಮಾತನಾಡಿ ಜನತೆಯಲ್ಲಿನ ಜಾತಿಪದ್ದತಿ ಮತ್ತು ಧಮರ್ಾಂಧತೆಯನ್ನು ತೊಡೆದು ಹಾಕಲು ಹೋರಾಟ ಮಾಡಿದ ನಾಯಕರ ಸಾಲಿನಲ್ಲಿ ಶ್ರೀಸಂತ ಸೇವಾಲಾಲ್ ಪಾತ್ರವು ಸಹ ಇದೆ. ಲಂಬಾಣಿ ಸಮುದಾಯದಲ್ಲಿ ಸೇವಾಲಾಲ್ ಬಹುದೊಡ್ಡ ಸಾಧುಪುರುಷ ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿಯ ಮೂಲಕ ಆಧ್ಯಾತ್ಮಿಕತೆಯ ಮೂಲಕ ಸಮುದಾಯದ ಸೇವೆ ಮಾಡಿದ ಮಹಾನ್ ಚಿಂತಕ ಎಂದರು.
ಜಿಪಂ ಸದಸ್ಯೆ ಪ್ರೇಮಾ ಮಾತನಾಡಿ ಕನರ್ಾಟಕದಲ್ಲಿ ಸೇವಾಲಾಲ್ ಜನ್ಮಸ್ಥಳವಾದ ಶಿವಮೊಗ್ಗ ಜಿಲ್ಲೆಯ ಸೊರಕೊಂಡನ ಕೊಪ್ಪದಲ್ಲಿ ಅಲ್ಲದೇ ರಾಜ್ಯದಾದ್ಯಂತ ಇಂದು ಸರಕಾರವೇ ಮೊಟ್ಟ ಮೊದಲ ಭಾರಿಗೆ ವಿಜೃಂಭಣೆಯಿಂದ ಶ್ರೀಸಂತ ಸೇವಾಲಾಲ್ ಜಯಂತಿ ಆಚರಣೆ ಮಾಡುತ್ತೀರುವುದು ಸಂತಸ ಎಂದರು.
ಸಮಾರಂಭದಲ್ಲಿ ಬಂಜಾರ ಸಮುದಾಯದ ತಾಲೂಕಿನ ಪ್ರಥಮ ಗ್ರಾಮ ಲೇಕ್ಕಾಧಿಕಾರಿ ರಂಜಿತಾ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಮಹಾಲಕ್ಷ್ಮಿಗೆ ಶಾಸಕ ಪಿ.ಆರ್.ಸುಧಾಕರಲಾಲ್ ಸನ್ಮಾನಿಸಿದರು. ನೂರಾರು ಬಂಜಾರ ಮಹಿಳೆಯರು ಬಂಜಾರ ನೃತ್ಯ ಮಾಡುವ ಮೂಲಕ ಗಣ್ಯರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಕಾರ್ಯಧ್ಯಕ್ಷ ಜೆ.ಎನ್ ನರಸಿಂಹರಾಜು, ತಾಪಂ ಉಪಾದ್ಯಕ್ಷೆ ನರಸಮ್ಮ, ಪಪಂ ಸದಸ್ಯ ಲಾರಿಸಿದ್ದಪ್ಪ, ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ . ಕಾಮಣ್ಣ, ತಾಲೂಕು ಲಂಬಾಣಿ ಸಂಘದ ಉಪಾದ್ಯಕ್ಷ ಕಿಶೋರ್, ಯುವ ಘಟಕದ ಅಧ್ಯಕ್ಷ ಕಾಳಿಚರಣ್, ಮುಖಂಡರಾದ ಕೃಷ್ಣಾನಾಯ್ಕ, ಲಕ್ಷ್ಮಣ್ ನಾಯ್ಕ , ಸಿದ್ದೇಶ್, ಮೀಸೆಲಕ್ಷ್ಮನಾಯಕ್, ನಾಗನಾಯ್ಕ ಕೃಷ್ಣ ಕುಮಾರನಾಯಕ್, ವೆಂಕಟೇಶನಾಯ್ಕ ಇತರರು ಇದ್ದರು.
(ಚಿತ್ರ ಇದೆ)
Comments