ಜೆಡಿಎಸ್ ಮೈತ್ರಿ ಬಲ ಕಂಡು ಕೆಂಗಣ್ಣು ಬಿಡುತ್ತಿರುವ ರಾಷ್ಟ್ರೀಯ ಪಕ್ಷಗಳು..!!

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ಹೊರತುಪಡಿಸಿ ಜೆಡಿಎಸ್ ಅಧಿಕಾರಕ್ಕೆ ಬರಬೇಕೆಂಬ ಗುರಿಯಿಂದ ಮಾಯಾವತಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಇದೀಗ ಎನ್ ಸಿಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಜೆಡಿಎಸ್ ನ ಕೇವಲ ಪ್ರಾದೇಶಿಕ ಪಕ್ಷ ವೆಂದು ಪರಿಗಣಿಸಿದ ರಾಷ್ಟೀಯ ಪಕ್ಷಗಳು ಕೆಂಗಣ್ಣು ಬಿಡುವಂತಾಗಿದೆ.
ಕರ್ನಾಟಕದಲ್ಲಿ ಹಿರಿಯ ರಾಜಕಾರಣಿ ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ(ಎನ್ ಸಿಪಿ) ಇನ್ನೂ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಿದೆ. 2008ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸದ ಎನ್ ಸಿಪಿ, 2013ರಲ್ಲಿ 224 ಸ್ಥಾನಗಳ ಪೈಕಿ 24ಸ್ಥಾನಕ್ಕೆ ಎನ್ ಸಿಪಿ ಸ್ಪರ್ಧಿಸಿತ್ತು. ಆದರೆ, ಬಿಎಸ್ಪಿಯಂತೆ ಎನ್ ಸಿಪಿ ಕೂಡಾ ಕರ್ನಾಟಕದಲ್ಲಿ ಗೆಲುವಿನ ಖಾತೆ ಆರಂಭಿಸುವ ಉತ್ಸಾಹದಲ್ಲಿದೆ. 2013ರ ಚುನಾವಣೆಯಲ್ಲಿ 24 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎನ್ ಸಿಪಿ 18,886 ಮತಗಳು ಶೇ 0.06 ಮತಪಾಲು ಗಳಿಸಿತ್ತು. ಮರಾಠಿ ಮತಗಳೇ ಗುರಿ: ಉತ್ತರ ಕರ್ನಾಟಕದಲ್ಲಿರುವ ಮರಾಠಿಗರ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹಾಗೂ ಕಾಂಗ್ರೆಸ್ಸಿಗೆ ಆಘಾತ ನೀಡಲು ಎನ್ ಸಿಪಿ ಜತೆ ಜೆಡಿಎಸ್ ಕೈಜೋಡಿಸಿದೆ. ಮುಖ್ಯವಾಗಿ ಮುಂಬೈ ಕರ್ನಾಟಕ ಭಾಗವನ್ನು ಜೆಡಿಎಸ್ ಗುರಿಯನ್ನಾಗಿಸಿಕೊಂಡಿದೆ.
Comments